ಡಾ.ಶಿವರಾಮ ಕಾರಂತ ಪ್ರಶಸ್ತಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಪಂ ಆಯ್ಕೆ

0

ನೆಲ್ಯಾಡಿ: ಡಾ| ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಅಂಗವಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯತ್‌ಗಳಿಗೆ ನೀಡುವ 2024ನೇ ಸಾಲಿನ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.


ಶಿರಾಡಿ ಗ್ರಾಮ ಪಂಚಾಯತ್‌ನಲ್ಲಿ 664 ಮಂದಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಚೀಟಿ ಮಾಡಿಸಿಕೊಂಡಿದ್ದಾರೆ. 2023-24ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯತ್‌ನಲ್ಲಿ 72,41,496 ರೂ. ಖರ್ಚು ಆಗಿದೆ. ಇದರಲ್ಲಿ 53.08 ಲಕ್ಷ ರೂ.ಕೂಲಿ ಮೊತ್ತ ಹಾಗೂ 18.68 ಲಕ್ಷ ರೂ.ಸಾಮಾಗ್ರಿ ಮೊತ್ತ ಪಾವತಿಯಾಗಿದೆ. ಒಟ್ಟು 16,797 ಮಾನವ ದಿನ ಸೃಜನೆಯಾಗಿದೆ. ಘನತ್ಯಾಜ್ಯ ಘಟಕ-1, ಕೋಳಿಶೆಡ್-1, ಹಟ್ಟಿ ರಚನೆ-9, ವಸತಿ-18, ಬಾವಿ-6, ಗೊಬ್ಬರಗುಂಡಿ-2, ಪೌಷ್ಠಿಕ ತೋಟ-5, ರಸ್ತೆ-4, ಅಡಿಕೆ ಗಿಡ-87, ಸೋಕ್‌ಪೀಟ್-2, ಇಂಗುಗುಂಡಿ-1, ಕಾಲುವೆ-2, ಕೃಷಿ ಹೊಂಡ-2 ಕಾಮಗಾರಿ ನಡೆದಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯತ್ ಮಾಡಿರುವ ಸಾಧನೆ ಪರಿಗಣಿಸಿ 2024ನೇ ಸಾಲಿನ ಡಾ| ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ.10ರಂದು ಕೋಟತಟ್ಟುನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ವಿಜಯಶಂಕರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

LEAVE A REPLY

Please enter your comment!
Please enter your name here