ಪುತ್ತೂರು: ಮುಹಿಯುದ್ದೀನ್ ಜುಮಾಮಸೀದಿ ಸಂಪ್ಯ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷರಾದ ಜಲೀಲ್ ಹಾಜಿ ಸಂಪ್ಯ ಇವರ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 2024-2025ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಪ್ಯ ಜಲೀಲ್ ಹಾಜಿ 28ನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಅಬೂಬಕ್ಕರ್ ಹಾಜಿ ಸಂಪ್ಯ ಮತ್ತು ಹಮೀದಾಲಿಸ್ ಸಂಟ್ಯಾರು, ಪ್ರ.ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಕಲ್ಲರ್ಪೆ, ಜೊತೆ ಕಾರ್ಯದರ್ಶಿಗಳಾಗಿ ಹುಸೈನ್ ನಂದಿನಿ ಮತ್ತು ರಝಾಕ್ ಸಂಪ್ಯ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಅಝೀಝ್ (ಅಜ್ಜಿಪ್ಪ) ಸಂಪ್ಯ, ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಇಡಬೆಟ್ಟು, ಜಮಾಅತ್ ಕಮಿಟಿಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹ್ಮಾನ್ ಫೈಝಿ (ಪುತ್ತು ಉಸ್ತಾದ್ ಸಂಪ್ಯ), ಅಬ್ಬಾಸ್ ಹಾಜಿ ಆರ್ಯಾಪು, ಇಬ್ರಾಹಿಂ ಅಮ್ಮುಂಜ, ಹಮೀದ್ ಸಂಪ್ಯ (ಕಂಡೆಕ್ಟರ್), ರಝಾಕ್ ಕೆ.ಎಂ.ಕೆ ಸಂಪ್ಯ, ನಿಸಾರ್ ಅಹ್ಮದ್ ಸಂಪ್ಯ, ಜಬ್ಬಾರ್ ಪರ್ಪುಂಜ-ಸಂಪ್ಯ, ಅಬ್ದುಲ್ಲಾ ಹಸ ಸಂಪ್ಯ, ಅಬ್ದುಲ್ ಖಾದರ್ ಎಸ್.ಪಿ., ನಾಸಿರ್ ಇಡಬೆಟ್ಟು, ಸಲಾಂ ಸಂಪ್ಯ ರಫೀಕ್ ಎಸ್.ಯಂ ಸಂಪ್ಯ, ಅಶ್ರಫ್ ಗ್ರೀನ್ ಸಂಪ್ಯ, ಫಾರೂಕ್ ಅಮ್ಮುಂಜ ರವರನ್ನು ಆಯ್ಕೆಮಾಡಲಾಯಿತು.