ನ.10ರಂದು ಬನ್ನೂರು ಹವ್ಯಕ ಭವನದಲ್ಲಿ ‘ಸ್ಪರ್ಧಾ ಸೌರಭ-ಪ್ರತಿಬಿಂಬ’ ಕಾರ್ಯಕ್ರಮ

0

ಪುತ್ತೂರು: ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ.) ಪುತ್ತೂರು ಶಾಖೆಯ ವತಿಯಿಂದ ನವೆಂಬರ್‌ 10ರಂದು ಬನ್ನೂರಿನ ಹವ್ಯಕ ಸಭಾಭವನದಲ್ಲಿ ‘ಸ್ಪರ್ಧಾ ಸೌರಭ-ಪ್ರತಿಬಿಂಬ’ ಕಾರ್ಯಕ್ರಮ
ದಿನಪೂರ್ತಿ ನಡೆಯಲಿದೆ.


ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30ರ ವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಂಜೆ 3ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಹುಮಾನ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ
ನಡೆಯಲಿದೆ. ಸಂಜೆ 5ರಿಂದ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ‘ನೃತ್ಯೋಹಂ’ ಭರತನಾಟ್ಯ ಪ್ರದರ್ಶನ ನಡೆಯಲಿದೆ.


ವಿವಿಧ ಸ್ಪರ್ಧೆಗಳಿಗೆ ಅವಕಾಶ:
ವಿವಿಧ ಸ್ಪರ್ಧೆಗಳ ಪೈಕಿ 6 ವರ್ಷದೊಳಗಿನವರಿಗೆ ಶ್ಲೋಕ ಪಠಣ, ಬಾಲ್ದಿಗೆ ಚೆಂಡು ಹಾಕುವುದು, ಚಿತ್ರಕ್ಕೆ ಬಣ್ಣ ತುಂಬುವುದು, 7ರಿಂದ 12 ವರ್ಷ ವಯೋಮಿತಿಯವರಿಗೆ
ಭಗವದ್ಗೀತಾ ಕಂಠಪಾಠ, ಚಿತ್ರಕಲೆ, ಶಂಖನಾದ, ಮಂತ್ರ ಪಠಣ, ಚಂದದ ಬರಹ, ಭಾವಗೀತೆ, 13ರಿಂದ 18 ವಯೋಮಾನದವರಿಗೆ ರಸಪ್ರಶ್ನೆ, ಆಶುಭಾಷಣ, ಭಾವಗೀತೆ, ಸಂಗೀತ ಕುರ್ಚಿ, ಪಾಯಸ ಕುಡಿಯುವುದು, ಸಾಮಾನ್ಯ ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಹವ್ಯಕ ಸಂಪ್ರದಾಯ ಗೀತೆ, ರಂಗೋಲಿ(ಚುಕ್ಕಿ), ಜಾನಪದ ಗೀತೆ, ಪಾಯಸ ಕುಡಿಯುವುದು, ಸವಿರುಚಿ (ತಂಬುಳಿ), ಸ್ಮರಣ ಶಕ್ತಿ, ಸಂಗೀತ ಕುರ್ಚಿ, ಭಾವಗೀತೆ ಸ್ಪರ್ಧೆ ನಡೆಯಲಿದೆ. ಎಲ್ಲ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಇರುತ್ತದೆ. ಹವ್ಯಕರಿಗೆ ಮಾತ್ರ
ಪ್ರವೇಶ ಇದ್ದು, 12 ವರ್ಷದ ವರೆಗಿನ ಸ್ಪರ್ಧಿಗಳಿಗೆ ಸ್ಮರಣಿಕೆ ನೀಡಲಾಗುವುದು. ಭಗವದ್ಗೀತೆ, ರಸಪ್ರಶ್ನೆ, ಸಂಪ್ರದಾಯ ಗೀತೆ, ರಂಗೋಲಿ, ಜಾನಪದ ಗೀತೆ ಸ್ಪರ್ಧೆಗಳಲ್ಲಿ ಮೂರು ಸ್ಥಾನ ಪಡೆದವರನ್ನು ಬೆಂಗಳೂರಿನಲ್ಲಿ ನಡೆಯುವ ಪ್ರತಿಬಿಂಬ ಗ್ರ್ಯಾಂಡ್‌ ಫಿನಾಲೆಗೆ ಆಯ್ಕೆ ಮಾಡಲಾಗುವುದು. ನವೆಂಬರ್‌ 8ರೊಳಗೆ ಸ್ಪರ್ಧೆಯಲ್ಲಿ ಭಾಗವಹಿಸುವವರು 7760641022 ಅಥವಾ 9448120721 ಅಥವಾ 8310941691 ನಂಬರಿಗೆ ಕರೆ ಮಾಡಿ ನೋಂದಾಯಿಸಬಹುದು ಎಂದು ಕಾರ್ಯಕ್ರಮದ ಸಂಯೋಜಕ ಶಂಕರ ಭಟ್‌ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here