ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮಾಡ್ನೂರು ಗ್ರಾಮ ಸಮಿತಿಯಿಂದ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ಮತ್ತು ದಂತ ತಪಾಸಣೆ ಶಿಬಿರ

0

ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಇದರ ಕಾವು ಮಾಡ್ನೂರು ಗ್ರಾಮ ಸಮಿತಿಯ ನೇತೃತ್ವದಲ್ಲಿ ಶ್ರಿ ಸತ್ಯಸಾಯಿ ಸೇವಾ ಸಮಿತಿ, ಈಶ್ವರಾಂಬಾ ಟ್ರಸ್ಟ್ ರಿ. ಗಾಂಧಿನಗರ ಮಂಗಳೂರು ಇವರ ಸಹಕಾರದೊಂದಿಗೆ ನಿಟ್ಟೆ ಜಸ್ಟಿಸ್ ಕೆ.ಎಸ್‌.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮತ್ತು ಸಮುದಾಯ ದಂತ ವಿಭಾಗ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ಮತ್ತು ದಂತ ತಪಾಸಣೆ ಶಿಬಿರವು ನ.10ರಂದು ನನ್ಯ ಜನಮಂಗಲ ಸಭಾಭವನದಲ್ಲಿ ನಡೆಯಿತು.

ಆರೋಗ್ಯದಿಂದ ಸಮಾಜದ ಸ್ವಾಸ್ಥ್ಯ-ಪುತ್ತಿಲ
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಸಾಮಾಜಿಕ ಜವಾಬ್ದಾರಿ ನೆಲೆಯಲ್ಲಿ ಪುತ್ತಿಲ ಪರಿವಾರ ಟ್ರಸ್ಟ್ ನ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಸೇವೆಯನ್ನು ನಡೆಸುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಆ ಮೂಲಕ ನಾಲ್ಕೈದು ಆಯಾಮಗಳಲ್ಲಿ ಕಾರ್ಯನಿರ್ವಹಿಸಿ ಕಳೆದ 1 ವರ್ಷದಲ್ಲಿ 240ಕ್ಕೂ ಅಧಿಕ ಸೇವಾ ಚಟುವಟಿಕೆಯ ಮೂಲಕ ಧರ್ಮ ಜಾಗೃತಿಯನ್ನು ಮೂಡಿಸಿದ್ದೇವೆ. ಆರೋಗ್ಯ ಸರಿ ಇದ್ರೆ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ, ಹಾಗಾಗಿ ಆರೋಗ್ಯ ಸೇವೆಗಾಗಿ ಟ್ರಸ್ಟ್ ನ ಮೂಲಕ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದೇವೆ, ನಿರುದ್ಯೋಗದ ನಿವಾರಣೆಗಾಗಿ ಉದ್ಯೋಗ ಸೇವಾ ಯೋಜನೆಯ ಮೂಲಕ ಈಗಾಗಲೇ 630 ಜನರಿಗೆ ಉದ್ಯೋಗ ಕಲ್ಪಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.


ಪುತ್ತಿಲ ಪರಿವಾರ ಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ ವಳಾಲುರವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾವು ಸರಯೂ ಕ್ಲಿನಿಕ್ ನ ಡಾ| ನವೀನ ಶಂಕರ ಮಳಿ, ಮಾತೃಶ್ರೀ ಅರ್ಥ್ ಮೂವರ್ಸ್ ನ ಮಾಲಕ ಅಮ್ಮಣ್ಣ ರೈ, ಯುವ ವಕೀಲ ಚಂದ್ರಹಾಸ ಈಶ್ವರಮಂಗಲ, ಪುತ್ತಿಲ ಪರಿವಾರ ಟ್ರಸ್ಟ್ ನ ಕಾರ್ಯದರ್ಶಿ ರವಿಕುಮಾ‌ರ್ ರೈ ಕೆದಂಬಾಡಿ, ಕಾವು ಗೋಪೂಜಾ ಸಮಿತಿ ಅಧ್ಯಕ್ಷ ನಹುಷ ಭಟ್, ಹಿರಿಯ ಕರಸೇವಕ ನಾರಾಯಣ ಆಚಾರ್ಯ ಮಳಿ, ಕಾವು ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ರವಿಚಂದ್ರ ಮಾಣಿಯಡ್ಕ, ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಸತ್ಯಸೇವಾ ಸಮಿತಿಯ ರಾಜ್ಯ ಸಮಿತಿ ಸದಸ್ಯ ನಿರಂಜನ ಹೆಬ್ಬಾರ್, ತಾಲೂಕು ಸಮಿತಿ ಅಧ್ಯಕ್ಷ ಪ್ರಸನ್ನ ಭಟ್, ವೈದ್ಯರುಗಳಾದ ಡಾ. ಅನಿಸ್, ಡಾ. ತಿಲಕ್ ಉಳ್ಳಾಲ, ಡಾ. ಮಮತಾ ಪ್ರಭಾಕರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅದ್ವಿತ್ ರಾವ್ ನಿಧಿಮುಂಡ ಪ್ರಾರ್ಥಿಸಿದರು. ಪುತ್ತಿಲ ಪರಿವಾರ ಟ್ರಸ್ಟ್ ನ ಸದಸ್ಯ ಸುನಿಲ್ ಬೋರ್ಕರ್ ರವರು ಸ್ವಾಗತಿಸಿ ಪುತ್ತಿಲ ಪರಿವಾರ ಕಾವು ಘಟಕದ ಚಿದಾನಂದ ಆಚಾರ್ಯ ವಂದಿಸಿದರು. ಚಂದ್ರಕಿರಣ್ ಕಾವು ಕಾರ್ಯಕ್ರಮ ನಿರ್ವಹಿಸಿದರು.

200ಕ್ಕೂ ಅಧಿಕ ಫಲಾನುಭವಿಗಳು:
ಬೆಳಿಗ್ಗೆ ಗಂಟೆ 9 ರಿಂದ ಅಪರಾಹ್ನ 1ರವರೆಗೆ ನಡೆದ ಶಿಬಿರದಲ್ಲಿ E.C.G 0 B.P, ಸಕ್ಕರೆ ಕಾಯಿಲೆ ತಪಾಸಣೆ, ಕಣ್ಣು ಪರೀಕ್ಷೆ ಹಾಗೂ ಉಚಿತ ಕನ್ನಡಕ, ದಂತ ಪರೀಕ್ಷೆ ಹಾಗೂ ಚಿಕಿತ್ಸೆ (Filling) ಎಲುಬು, ಚರ್ಮ ಹಾಗೂ ಮಕ್ಕಳ ವಿಭಾಗ,ಕಿವಿ, ಮೂಗು, ಗಂಟಲು ನೋವು(E.N.T) ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ ಸುಮಾರು 200ಕ್ಕೂ ಅಧಿಕ ಜನ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here