ಬಡಗನ್ನೂರು: ಹಿರಿಯ ವಿದ್ಯಾರ್ಥಿ ಸಂಘ, ಕೊಯಿಲ, ಬಡಗನ್ನೂರು ಇದರ ಆಶ್ರಯದಲ್ಲಿ ಅಶೋಕ ಜನಮನ-ಟ್ರೋಫಿ 2024 ನಿಗದಿತ ಓವರ್ಗಳ ಸೂಪರ್ ಸಿಕ್ಸ್ (7 ಜನರ) ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನ.24 ಬೆಳಿಗ್ಗೆ ಗಂ 8.30 ಕೊಯಿಲ ಬಡಗನ್ನೂರು ಶಾಲಾ ವಠಾರ ನಡೆಯಲಿದೆ.
ಕಾರ್ಯಕ್ರಮವನ್ನು, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಕೊಯಿಲ ಬಡಗನ್ನೂರು ಶಾಲಾ ಶಾಲಾಭಿವೃದ್ಧಿ ಸಮಿತಿ, ಅಧ್ಯಕ್ಷ ಸತೀಶ್ ನಾಯ್ಕ ಸಿ.ಯಾಚ್, ಎಸ್.ಎಸ್.ಎಫ್. ಯುನಿಟ್ ಅಧ್ಯಕ್ಷ ಹಮೀದ್ ಕೊಯಿಲ, ಈಶ್ವರಮಂಗಲ ಪೊಲೀಸ್ ಠಾಣೆ ಎ ಎಸ್ ಐ ಚಂದ್ರಶೇಖರ, ಪ್ರವೀಣ್ ರೈ ನಡುಕೂಟೇಲು ಸಂಪ್ಯ ಪೊಲೀಸ್ ಠಾಣೆ, ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ನಿಡ್ಪಳ್ಳಿ ಗ್ರಾ.ಪಂ ಸದಸ್ಯ ಅವಿನಾಶ್ ಕುಡ್ಡಿಲ, ಉದ್ಯಮಿ ಪ್ರವೀಣ್ ಕುಮಾರ್ ಮುಡಿಪಿನಡ್ಕ (ದುಬೈ) ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಕೊಯಿಲ-ಬಡಗನ್ನೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೊಯಿಲ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೌರವ ಉಪಸ್ಥಿತರಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಉದ್ಯಮಿ ರಿತೇಶ್ ಕುಮಾರ್ ಶೆಟ್ಟಿ, ಪುತ್ತೂರು ಪದ್ಮಶ್ರೀ ಸೋಲಾರ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ್ ಶೆಟ್ಟಿ ಕಾವು, ಪುತ್ತೂರು ಉದ್ಯಮಿ ಸತೀಶ್ ರೈ ಕಟ್ಟಾವು, ಸುಳ್ಯಪದವು ಶೀತಲ್ ಬಾರ್ ಎಂಡ್ ರೆಸ್ಟೋರೆಂಟ್ ಮಾಲಕ ಸುರೇಶ್ ಕುಮಾರ್, ಸಂಪ್ಯ ಪೊಲೀಸ್ ಠಾಣಾ ಎಸ್ ಐ ಜಂಜೂರಾಜ್ ಮಹಾಜನ್, ಮಂಗಳಾದೇವಿ ಟ್ರಾನ್ಸ್ಪೋರ್ಟ್ ಮಾಲಕ ಸುಧಾಕರ ಶೆಟ್ಟಿ, ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉದ್ಯಮಿ ಸದಾಶಿವ ರೈ ಕೊಯಿಲ, ಮಂಗಳೂರು ಶ್ರೀ ಕಟೀಲ್ ಲಾಜಿಸ್ಟಿಕ್, ಮಾಲಕ ಜನಾರ್ದನ ಪೂಜಾರಿ ಪದಡ್ಕ, ಬಡಗನ್ನೂರು ಗ್ರಾ.ಪಂ ಸದಸ್ಯ ಲಿಂಗಪ್ಪ ಮೋಡಿಕೆ, ಕೊಯಿಲ ಬಡಗನ್ನೂರು, ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಗಿರೀಶ್ ಭಾಗವಹಿಸಲಿದ್ದಾರೆ.
ಪ್ರಥಮ 5555/- ಹಾಗೂ ಟ್ರೋಫಿ, ದ್ವಿತೀಯ 3333 ಹಾಗೂ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನವಾಗಿ ಪಂದ್ಯಶ್ರೇಷ್ಠ, ಉತ್ತಮ ಎಸೆತಗಾರ, ಉತ್ತಮ ದಾಂಡಿಗ, ಉತ್ತಮ ಕ್ಷೇತ್ರರಕ್ಷಕ, ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ನೀಡಲಾಗುವುದು.