ಪುತ್ತೂರು: ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನ ಇದರ ಆಶ್ರಯದಲ್ಲಿ ಮಾಂಡೋವಿ ಮೋಟಾರ್ಸ್ ಪ್ರೈ.ಲಿ ಇವರ ಪ್ರಾಯೋಜಕತ್ವದಲ್ಲಿ ಸುಳ್ಯ ತಾಲೂಕು ಮುರುಳ್ಯ ರೇಷ್ಮಾ ನಿಲಯದಲ್ಲಿ ಗೋ ಆಧಾರಿತ ಕೃಷಿಯ ಬಗೆಗಿನ ಕಾರ್ಯಾಗಾರ ಹಾಗೂ ಗೋಗ್ರಾಸ ಸಹಿತ ಗೋಪೂಜೆ ಕಾರ್ಯಕ್ರಮವು ನ.9ರಂದು ನಡೆಯಿತು.
ಕೃಷಿ ಪ್ರಶಸ್ತಿ ವಿಜೇತ ಸಾವಯವ ಕೃಷಿಕ ಎ ಪಿ ಸದಾಶಿವ ಮರಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಪ್ರವೀಣ ಸರಳಾಯ ಮುಖ್ಯ ಅತಿಥಗಳಾಗಿ ಉಪಸ್ಥಿತರಿದ್ದರು.
ಮಾಂಡೋವಿ ಮೋಟರ್ಸ್ ಗ್ರಾಮೀಣ ವಿಭಾಗದ ಮಾರಾಟ ಪ್ರಬಂಧಕ ಸುರೇಶ್ ಬಿ.ಜಿ, ಪ್ರಗತಿಪರ ಕೃಷಿಕ ಡಾ. ಪಿ ಆರ್ ಭಟ್, ಎಡಮಂಗಲ ಗ್ರಾ.ಪಂ ಅಧ್ಯಕ್ಷ ರಾಮಣ್ಣ ಗೌಡ ಜಾಲ್ತಾರು, ಸುಳ್ಯ ತಾಲೂಕು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷಯ್ ಆಳ್ವ ಮತ್ತು ಮನೆಯವರು ಕಾರ್ಯಕ್ರಮ ಆಯೋಜಿಸಿ ನಿರ್ವಹಿಸಿದರು. ಉಪ್ಪಿನಂಗಡಿ ಮಾಂಡೋವಿ ಮೋಟರ್ಸ್ನ ಸೀನಿಯರ್ ರಿಲೆಶನ್ಶಿಪ್ ಮ್ಯಾನೆಜರ್ ಶ್ರೀ ಹರ್ಷ ರೈ, ಸೇಲ್ಸ್ ಆಫಿಸರ್ ಚೇತನ್ ಕುಮಾರ್ ಮತ್ತು ಮುರಳ್ಯ ಪರಿಸರವಾಸಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.