ಸರ್ವೆ ಗೋಕುಲ್ ಗಾರ್ಡನ್‌ನಲ್ಲಿ ವಿಷ್ಣುಮಾಯಾ ಸ್ವಾಮಿಯ ಭರತನಾಟ್ಯ ಕಾರ್ಯಕ್ರಮ

0

ಪುತ್ತೂರು: ಪೂಜ್ಯರಾದ ಗೋವರ್ಧನ ಹೆಗ್ಡೆ ಹಾಗೂ ಸರೋಜ ಗೋಕುಲ್ ಹಾಗೂ ಸನ್ಯಾಸಿ ಗುರುಗಳ ಶುಭಾಶೀರ್ವಾದದಲ್ಲಿ ಪುತ್ತೂರಿನ ಸರ್ವೆ ಗೋಕುಲ್ ಗಾರ್ಡನ್‌ನಲ್ಲಿ 2ನೇ ವರ್ಷದ ವಿಷ್ಣುಮಾಯಾ ಸ್ವಾಮಿಯ ಭರತನಾಟ್ಯ ಕಾರ್ಯಕ್ರಮ ಹಾಗೂ ವಿಷ್ಣುಮಾಯಾ ಮಹಾತ್ಮ್ಯಂ ಕಥಾಪುರಾಣದ ಲೋಕಾರ್ಪಣೆ, ಅಮ್ನಾಯಾಃ ಯಕ್ಷಸಂಸ್ಕೃತಿ ಬಳಗ ಗಾಳಿಮನೆ ವತಿಯಿಂದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ
ನ.9ರಂದು ನಡೆಯಿತು.

ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ). ಇದರ ವಿದ್ಯಾರ್ಥಿಗಳಿಂದ ನೃತ್ಯೋಹಂ ಭರತನಾಟ್ಯ ಕಾರ್ಯಕ್ರಮ ಏರ್ಪಟ್ಟಿತು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ಕಲಾ ಅಕಾಡೆಮಿಯ ನೃತ್ಯ ತಂಡ ಭರತನಾಟ್ಯ ಪ್ರದರ್ಶನ ನೀಡಿತು.

ಈ ಸಂದರ್ಭ ವಿಷ್ಣುಮಾಯಾ ಮಹಾತ್ಮ್ಯಂ ಕಥಾ ಪುರಾಣವನ್ನು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅನಾವರಣಗೊಳಿಸಿದರು. ಮುಂದಿನ ದಿನಗಳಲ್ಲಿ ಇಲ್ಲಿ ವಿಷ್ಣುಮಾಯಾ ಸ್ವಾಮಿಯ ದೇವಾಲಯ ನಿರ್ಮಾಣವಾಗಲಿ ಎಂದು ಹಾರೈಸಿದರು. ಇದೇ ಕಥಾ ಪುರಾಣದ ಯಕ್ಷಗಾನ ತಾಳಮದ್ದಳೆ ಡಾ.ವಿನಾಯಕ ಭಟ್ಟ ಗಾಳಿಮನೆ ಇವರ ಮಾರ್ಗದರ್ಶನದಲ್ಲಿ ನೆರವೇರಿತು.

ತಾಳಮದ್ದಳೆಯಲ್ಲಿ ರಮೇಶ್ ಭಟ್ ಪುತ್ತೂರು ಭಾಗವತಿಕೆ, ಚಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ ಹಾಗೂ ಮುರಳೀಧರ ಕಲ್ಲೂರಾಯ, ಚಕ್ರತಾಳದಲ್ಲಿ ಕೃಷ್ಣಾ ಜೆ.ರಾವ್ ಅಗ್ರಹಾರ, ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ, ಈಶ್ವರ ಪ್ರಸಾದ ಧರ್ಮಸ್ಥಳ, ಡಾ.ವಿನಾಯಕ ಭಟ್ಟ ಗಾಳಿಮನೆ, ಭಾಸ್ಕರ ಬಾರ್ಯ, ದಿವಾಕರ ಆಚಾರ್ಯ ಗೇರುಕಟ್ಟೆ, ವಿದ್ವಾನ್ ಕೇಶವ ಭಟ್ಟ ಕೇಕಣಾಜೆ, ಡಾ.ಶಿವಕುಮಾರ ಅಲಗೋಡು, ವಿದ್ಯಾ ಜೆ.ರಾವ್ ಇದ್ದರು.

ಕಾರ್ಯಕ್ರಮ ಆಯೋಜಕರಾದ ರಾಜೇಶ್ ಹೆಗ್ಡೆ(ಗೋಕುಲ್) ಪ್ರಸ್ತಾವಿಕದಲ್ಲಿ, ನನ್ನ ಜೀವನದಲ್ಲಿ ಪ್ರಮುಖ ಬದಲಾವಣೆಗೆ ಕಾರಣವೇ ವಿಷ್ಣುಮಾಯಾ ಸ್ವಾಮಿ. ಸ್ವಾಮಿಯ ಕೃಪಾಕಟಾಕ್ಷದಿಂದ ಎಲ್ಲರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ವೇದಿಕೆಯಲ್ಲಿ ಯಶವಂತ ಗುರೂಜಿ, ಉದ್ಯಮಿಗಳಾದ ಪ್ರಕಾಶ್ ಬೆಂಗಳೂರು, ಗಂಗಾಧರ ಬೆಂಗಳೂರು, ಸುರೇಶ್ ನಾಯ್ಕ್ ಬಂಟ್ವಾಳ, ರಾಜೇಶ್ ಜೀತ್‌ನೆಟ್ ಪುತ್ತೂರು, ರಕ್ಷಿತ್ ಜೈನ್ ಬೊಳುವಾರು, ಪ್ರವೀಣ್ ಬೊಳುವಾರು, ಗೋಕುಲ್ ಮನೆಯವರು, ಗಣ್ಯರು ಇದ್ದರು. ಈ ಸಂದರ್ಭ ಅತಿಥಿ, ಗಣ್ಯರನ್ನು ಶಾಲುಹೊದಿಸಿ, ಪೇಟೆ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here