ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ರಾಮಕುಂಜ ಕ್ಲಸ್ಟರ್ನ ಸಂಯುಕ್ತ ಆಶ್ರಯದಲ್ಲಿ ನ.7ರಂದು ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾಕಾರಂಜಿಯ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಪ್ರಥಮ ಸಮಗ್ರ ತಂಡ ಪ್ರಶಸ್ತಿ ಲಭಿಸಿದೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದೇಶ ಭಕ್ತಿಗೀತೆ-ಸ್ನಿಗ್ಥಾ ಎನ್.ಎಸ್. ಪ್ರಥಮ, ಪ್ರಬಂಧ-ಅನ್ವಿತಾ ಪ್ರಥಮ, ಅಭಿನಯ ಗೀತೆ-ದೃತಿ ಕೆ ಎ., ಪ್ರಥಮ, ಕ್ಲೇ ಮಾಡೆಲಿಂಗ್-ಆಧ್ಯಾ ಡಿ.ಇ.-ಪ್ರಥಮ, ಭಕ್ತಿಗೀತೆ-ಆರಾಧ್ಯಾ ಓ.ಆರ್. ಪ್ರಥಮ, ಮಿಮಿಕ್ರಿ-ಚೇತನ್ ಕಲ್ಲಪ್ಪ ಪೂಜೇರ ದ್ವಿತೀಯ, ಇಂಗ್ಲಿಷ್ ಕಂಠಪಾಠ-ಆಯುಷ್ದೇವ್ ದ್ವಿತೀಯ, ಹಿಂದಿ ಕಂಠಪಾಠ-ಅನ್ವಿತಾ ದ್ವಿತೀಯ, ಕವನ ವಾಚನ-ಕೆ.ವಿ.ಪೃಥ್ವಿ ತೃತೀಯ, ತುಳು ಕಂಠಪಾಠ-ಛಾಯಾಸ್ವರೂಪ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕನ್ನಡ ಕಂಠಪಾಠ-ಖುಷಿ ಎ. ಪ್ರಥಮ, ಇಂಗ್ಲೀಷ್ ಕಂಠಪಾಠ-ಸಾನ್ವಿ ಗೌಡ ಬಿ.ಎಸ್ ಪ್ರಥಮ, ದೇಶ ಭಕ್ತಿಗೀತೆ-ಖುಷಿ ಜೆ.ಹೆಚ್ ದ್ವಿತೀಯ, ಕಥೆ ಹೇಳುವುದು-ದೇವಾಂಶ್ ವೈ.ಹೆಚ್ ತೃತೀಯ, ಅಭಿನಯ ಗೀತೆ-ಲಕ್ಷ್ಯಾ ದ್ವಿತೀಯ, ಕ್ಲೇ ಮಾಡೆಲಿಂಗ್-ಸನ್ವಿತ್ ಪೂಜಾರಿ ಪ್ರಥಮ, ಭಕ್ತಿಗೀತೆ-ಉತ್ಸವಿ ಎಸ್ ಪ್ರತಿಷ್ಠಾ ಪ್ರಥಮ, ಆಶು ಭಾಷಣ-ದೇವಾಂಶ್ ವೈ.ಹೆಚ್ ದ್ವಿತೀಯ, ಛದ್ಮವೇಷ-ಧನ್ವಿ ಜಿ.ವಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ಆರ್.ಬಿ., ಪ್ರೌಢಶಾಲಾ ಮುಖ್ಯಗುರು ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಲೋಹಿತಾ ಎ., ಹಾಗೂ ಶಿಕ್ಷಕ-ಶಿಕ್ಷಕೇತರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.