ಕೆದಂಬಾಡಿ ಗ್ರಾ.ಪಂ ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಮೋಹನ್ ತಿಂಗಳಾಡಿ ನಾಮಪತ್ರ ಸಲ್ಲಿಕೆ

0

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್‌ನ 4 ನೇ ವಾರ್ಡ್‌ಗೆ ಉಪ ಚುನಾವಣೆಯು ನ.23 ರಂದು ನಡೆಯಲಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮೋಹನ್ ತಿಂಗಳಾಡಿಯವರು ನ.12 ರಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿ ಪೊಡಿಯರವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿ ಕೃಷ್ಣಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಬಿಜೆಪಿಯ ಪ್ರಮುಖರಾದ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಿಕಟಪೂರ್ವ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡು, ಸದಸ್ಯರುಗಳಾದ ರತನ್ ರೈ ಕುಂಬ್ರ, ಕೃಷ್ಣ ಕುಮಾರ್ ಇದ್ಯಪೆ, ವಿಠಲ ರೈ ಮಿತ್ತೋಡಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ರೇವತಿ ಬೋಳೋಡಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಎಸ್‌ಸಿ ಮೋರ್ಛಾ ಮಂಡಲ ಅಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಬಿಜೆಪಿ ಮುಖಂಡರುಗಳಾದ ಬೂಡಿಯಾರ್ ರಾಧಕೃಷ್ಣ ರೈ, ಕಡಮಜಲು ಸುಭಾಷ್ ರೈ, ಸುರೇಶ್ ಆಳ್ವ, ಸತೀಶ್ ಪಾಂಬಾರು, ಮುರಳೀಕೃಷ್ಣ ಹಸಂತಡ್ಕ, ವಿಜಯ ಕುಮಾರ್ ರೈ ಕೋರಂಗ, ನೆಟ್ಟಣಿಮುಡ್ನೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು,ಜಯರಾಮ ರೈ ಮಿತ್ರಂಪಾಡಿ,ಜಯರಾಮ ರೈ ಬಾಳಯ, ಬಾಲಚಂದ್ರ ರೈ ಚಾವಡಿ, ಶರತ್ ಗೌಡ ಗುತ್ತು, ಭಾಸ್ಕರ ಬಲ್ಲಾಳ್ ಕೆದಂಬಾಡಿಬೀಡು, ಕೆ.ಟಿ ನಾರಾಯಣ, ಪ್ರಶಾಂತ್ ತ್ಯಾಗರಾಜೆ, ಕಿಶೋರ್ ದರ್ಬೆ, ಶರತ್ ಕುಮಾರ್ ರೈ ದೇರ್ಲ, ರವಿ ಗಾಂಧಿನಗರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.


ನಾಮಪತ್ರ ಸಲ್ಲಿಕೆಯ ಮೊದಲು ತಿಂಗಳಾಡಿ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು ಬಳಿಕ ಅಲ್ಲಿಂದ ಮೆರವಣಿಗೆಯ ಮೂಲಕ ದೇವಗಿರಿ ಶ್ರೀ ದೇವತಾ ಭಜನಾ ಮಂದಿರಕ್ಕೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಮೂಲಕ ಪಂಚಾಯತ್‌ಗೆ ಬಂದು ನಾಮಪತ್ರ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here