ಕೋಡಿಂಬಾಡಿ ಪಡಿತರ ಕೇಂದ್ರಕ್ಕೆ ಶಾಸಕ ಅಶೋಕ್ ರೈ ದಿಢೀರ್ ಭೇಟಿ-ರೇಷನ್ ಅಕ್ಕಿ ಪರಿಶೀಲನೆ

0


ಪುತ್ತೂರು: ತನ್ನ ಗ್ರಾಮದ ಪಡಿತರ ಅಕ್ಕಿ ವಿತರಣಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಶಾಸಕರು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಮಾತ್ರವಲ್ಲದೆ ಅಕ್ಕಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿ ಗ್ರಾಮಸ್ಥರ ಜೊತೆ ವಿಚಾರ ವಿನಿಮಯ ನಡೆಸಿದ್ದಾರೆ.


ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯಡಿ ಕುಟುಂಬದ ಪ್ರತೀಯೊಬ್ಬರಿಗೂ ತಲಾ 5 ಕೆ ಜಿ ಅಕ್ಕಿಯಂತೆ ಉಚಿತವಾಗಿ ವಿತರಣೆಯಾಗುತ್ತಿದೆ. ಅಕ್ಕಿಯಲ್ಲಿ ಗುಗ್ಗುರು(ಕರ್ಣಕೀಟ) ಇದೆ ಎಂದು ಕೆಲವರು ಆರೋಪ ಮಾಡಿದ್ದರು. ಈ ಕಾರಣಕ್ಕೆ ದಿಢೀರ್ ಪಡಿತರ ಕೇಂದ್ರಕ್ಕೆ ತೆರಳಿ ಶಾಸಕರು ಅಕ್ಕಿಯನ್ನು ಪರಿಶೀಲನೆ ನಡೆಸಿದ್ದಾರೆ.

ರಾಜ್ಯ ಸರಕಾರದ ಅನ್ನ ಭಾಗ್ಯದ ಅಕ್ಕಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿದ್ದೇನೆ. ಅಕ್ಕಿ ಚೆನ್ನಾಗಿಯೇ ಇದೆ. ಬೆಳ್ತಿಗೆ ಅಕ್ಕಿ ಮತ್ತು ಬಿಳಿ ಅಕ್ಕಿಯನ್ನು ನೀಡಲಾಗುತ್ತದೆ. ಬೆಳ್ತಿಗೆ ಅಕ್ಕಿಯೂ ಚೆನ್ನಾಗಿದೆ, ಯಾವುದೇ ಗುಗ್ಗುರುಗಳು ಇಲ್ಲ. ಬಿಳಿ ಅಕ್ಕಿಯೂ ಚೆನ್ನಾಗಿಯೇ ಇದೆ. ದೋಸೆ, ಪುಂಡಿ, ಬಾಲೆ ಎಲೆ ತಿಂಡಿ, ಪತ್ತಿರಿ ಮಾಡಲು ಈ ಅಕ್ಕಿ ಬಳಕೆ ಮಾಡುತ್ತಾರೆ. ಅಕ್ಕಿ ಸೂಪರಾಗಿದೆ. ನನ್ನ ಕ್ಷೇತ್ರದ ಪ್ರತೀಯೊಂದು ಪಡಿತರ ಅಂಗಡಿಯಲ್ಲೂ ಗುಣಮಟ್ಟದ ಅಕ್ಕಿಯನ್ನೇ ವಿತರಣೆ ಮಾಡುತ್ತಿದ್ದಾರೆ.
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here