ವಿಟ್ಲ: ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನ ಸಿ.ಎಸ್.ಆರ್.ಫಂಡ್ ನ ಮೂಲಕ ಬಂಟ್ವಾಳ ತಾಲೂಕು ಅಳಕೆ ಮಜಲು ಕಿ.ಪ್ರಾ. ಶಾಲೆಗೆ ಕೊಡಲ್ಪಟ್ಟ 30000ರೂಪಾಯಿ ಮೌಲ್ಯದ ಎರಡು ಸ್ಮಾರ್ಟ್ ಟಿವಿಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಜೋಸ್ ಆಲುಕ್ಕಾಸ್ ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ರತೀಶ್ ಸಿ.ಪಿ., ಸಿಬ್ಬಂದಿ ಉದಯ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ತಿರುಮಲೇಶ್ವರ ನಾಯ್ಕ್ , ಉಪಾದ್ಯಕ್ಷರಾದ ರೂಪ ಕಿಶೋರ್ ಪುಂಡಿಕಾಯಿ, ಶಾಲಾ ಮುಖ್ಯೋಪಾಧ್ಯಾಯರಾದ ಇಸ್ಮಾಲಿ ಕೆ, ಸಹಶಿಕ್ಷಕರಾದ ರಾಜೀವಿ, ಅನುರಾಧ ಡಿ, ಜ್ಯೋತಿ, ಶೋಭಾ, ಬಲ್ಕಿಸ್, ದಿವ್ಯಾ ಮೊದಲಾವದರು ಉಪಸ್ಥಿತರಿದ್ದರು.