ಸವಣೂರು:ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ “ಹೂಡಿಕೆ ಜಾಗೃತಿ” ಕಾರ್ಯಗಾರ ನ.14ರಂದು ನಡೆಯಿತು.
ಕಾರ್ಯಗಾರವನ್ನು ಸಂಸ್ಥೆಯ ಉಪ ಪ್ರಾಂಶುಪಾಲ ಶೇಷಗಿರಿ ಎಂ ಅವರು ಉದ್ಘಾಟಿಸಿದರು. ಈ ಕಾರ್ಯಗಾರವು 2 ಅವಧಿಯನ್ನು ಒಳಗೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಎಮ್. ಎಫ್. ಐ ರಿಜ್ ಮ್ಯುಚ್ಯೂವಲ್ ಫಂಡ್ ಡಿಸ್ಟ್ರಿಬ್ಯೂಟರ್ ಮತ್ತು ಫಿನಾನ್ಶಿಯಲ್ ಎಡ್ವೈಸರ್ ಕುರಿತು ಮತ್ತು ನಿರಂಜನ್ ರೈ ಇಲಾವರು ಸ್ಟಾಕ್ ಮಾರ್ಕೆಟ್ ಮತ್ತು ಮ್ಯುಚ್ಚಲ್ ಫಂಡ್ ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ ವಹಿಸಿದ್ದರು. ವಾಣಿಜ್ಯ ವಿಭಾಗದ ಸಂಘಟಕಿ ಅಶ್ವಿನಿ ಕೆ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಸಂಘಟಕ ಅಭಿಜ್ಞಾ ಸ್ವಾಗತಿಸಿ,ವಿದ್ಯಾರ್ಥಿಯಾದ ವಾತ್ಸಲ್ಯ ವಂದಿಸಿದರು. ವಿದ್ಯಾರ್ಥಿನಿ ಪ್ರೀತಿ ನಿರ್ವಹಿಸಿದರು,ಶ್ರಾವ್ಯವಾಣಿ ಪ್ರಾರ್ಥಿಸಿದರು.