ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡುವ ಮಹಾವಿದ್ಯಾಲಯದ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ.
ನ.13ರಂದು ಚಿಕ್ಕೋಡಿಯ ಕೆ.ಎಲ್.ಇ. ಸೊಸೈಟಿ ಕಾನೂನು ಮಹಾವಿದ್ಯಾಲಯದಲ್ಲಿ, ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಆಯೋಜಿಸಿದ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯಗಳ ಅಂತರ್ ಕಾಲೇಜು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಜೊತೆಗೆ ಚತುರ್ಥ ಬಿ.ಎ.ಎಲ್.ಎಲ್.ಬಿ.ಯ ವಿದ್ಯಾರ್ಥಿ ವಿಜಯ್ ಶ್ರೀಹರಿ ವೈಯಕ್ತಿಕ ದ್ವಿತೀಯ ಸ್ಥಾನವನ್ನು ಹಾಗೂ ಅಂತಿಮ ಬಿ.ಎ.ಎಲ್.ಎಲ್.ಬಿ.ಯ ವಿದ್ಯಾರ್ಥಿನಿ ಪ್ರಜ್ಞಾ ವೈಯಕ್ತಿಕ ಚತುರ್ಥ ಸ್ಥಾನವನ್ನು ಪಡೆದಿರುತ್ತಾರೆ. ಪುರುಷರ ತಂಡದಲ್ಲಿ ಪ್ರಥಮ ಬಿಎಎಲ್ಎಲ್ಬಿ.ಯ ಅನುದೀಪ್, ದ್ವಿತೀಯ ಬಿಎಎಲ್ಎಲ್ಬಿಯ ಹಿತೇಶ್, ಸುಶಾಂತ್, ಶ್ರೀತೇಜ್, ತೃತಿಯ ಬಿಎಎಲ್ಎಲ್ಬಿ.ಯ ಲಿಖಿತ್ ಪ್ರಸಾದ್, ಅಮಲ್ ರಾಮ್ ಸಂತೋಷ್, ಅಶ್ವಿತ್ ಕುಮಾರ್, ಚತುರ್ಥ ಬಿಎಎಲ್ಎಲ್ಬಿ.ಯ ವಿಜಯ್ ಶ್ರೀ ಹರಿ ಹಾಗೂ ಅಂತಿಮ ಬಿ.ಎ.ಎಲ್.ಎಲ್.ಬಿ.ಯ ಚಿಂತನ್ ರವರು ಈ ಸಾಧನೆ ಮಾಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಎಲ್.ಎಲ್.ಬಿ.ಯ ಪ್ರಮೀಳಾ, ದ್ವಿತೀಯ ಬಿ.ಎ.ಎಲ್.ಎಲ್.ಬಿ.ಯ ಪ್ರಣಮ್ಯ ಪಕಳ, ಆಕೃತಿ, ಚತುರ್ಥ ಬಿ.ಎ.ಎಲ್.ಎಲ್.ಬಿ.ಯ ವೃಂದಾ, ಯಶ್ವಿತಾ ಹಾಗೂ ಅಂತಿಮ ಬಿ.ಎ.ಎಲ್.ಎಲ್.ಬಿ.ಯ ಪ್ರಜ್ಞಾ ಈ ಸಾಧನೆ ಮಾಡಿರುತ್ತಾರೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕ್ರೀಡಾ ಕಾರ್ಯದರ್ಶಿಯಾದ ಅಂತಿಮ ಬಿ.ಎ.ಎಲ್.ಎಲ್.ಬಿ.ಯ ಹಿತೇಶ್ ಸಹಕರಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಕುಮಾರ್ ಎಂ.ಕೆ. ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಿಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರು, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.