ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ನ.14ರಂದು ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಖ್ಯಾತ ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪುಣ್ಯವಂತರು. ಇಲ್ಲಿಯ ಕಲಿಕಾ ವಾತಾವರಣ ಮಕ್ಕಳನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದೆ. ಮಕ್ಕಳ ಕನಸು ನನಸು ಮಾಡುವಲ್ಲಿ ಸಂಸ್ಥೆಯು ಅವಿರತ ಶ್ರಮಿಸುತಿದೆ ಎಂದರು .
ಶಾಲಾ ನಾಯಕ ಹತ್ತನೇ ತರಗತಿಯ ವಿದ್ಯಾರ್ಥಿ ಪ್ರಸ್ತುತ್ ರೈ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾವು ಸಂಸ್ಥೆಯಲ್ಲಿ ಸಿಗುವ ಪಠ್ಯ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುತ್ತಾ ಹೆತ್ತವರ ಮತ್ತು ಶಿಕ್ಷಕ ವೃಂದದವರ ಪ್ರೀತಿಗೆ ಪಾತ್ರರಾಗಬೇಕು ಎಂದರು. ಮುಖ್ಯ ಅತಿಥಿಯಾಗಿರುವ ಸಂಸ್ಥೆಯ ರಾಷ್ಟ್ರಮಟ್ಟದ ಪ್ರತಿಭೆ ಶ್ರೀಮಾ ಕೆ ಎಚ್ , ರಾಜ್ಯಮಟ್ಟದ ಪ್ರತಿಭೆಗಳಾದ ಮೋನಿಶ್ ತಂಟೆಪ್ಪಾಡಿ , ಸಾನ್ವಿಕಾ ಎಚ್ , ಜಿಲ್ಲಾ ಮಟ್ಟದ ಪ್ರತಿಭೆ ಧನುಷ್ ಕೆ ವೇದಿಕೆಯಲ್ಲಿ ಆಸೀನರಾಗಿದ್ದರು.
ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ದಿವೀಶ್ ಮುರುಳ್ಯ ಶುಭ ಹಾರೈಸಿದರು. ವೇದಿಕೆಯಲ್ಲಿ ಸಹ ಆಡಳಿತ ಅಧಿಕಾರಿ ಹೇಮ ನಾಗೇಶ್ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಉಪಸ್ಥಿತರಿದ್ದರು .ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕ ಮಾತಿನೊಂದಿಗೆ ಮಕ್ಕಳಿಗೆ ಶುಭ ಹಾರೈಸಿದರು .ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಸ್ವಾಗತಿಸಿದರು .ಶಿಕ್ಷಕಿ ರಚನ ಪ್ರಾರ್ಥಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಆಂಗ್ಲ ಮಾಧ್ಯಮದ ಸಹ ಮುಖ್ಯಸ್ಥೆ ಅನಿತಾ ಜೆ ರೈ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಪದ್ಮರಾಜ್ ಬಿ ಸಿ ಚಾರ್ವಕ ಮಕ್ಕಳನ್ನು ರಂಜಿಸಿದರು. ವಿದ್ಯಾರ್ಥಿಗಳಾದ ರಾಶಿ ಕೆ ಸಿ,ಶ್ರದ್ದಾ ಕೆ. ಡಿ, ಗ್ರೀಷ್ಮ ಕೆ ಎಚ್, ಗ್ರೀಷ್ಮ ರೈ, ಮಾನ್ವಿ ಜಿ ಎಸ್, ಅನುಶ್ರೀ ಎ ಎಂ , ಪ್ರಣೀಧಿ ಧನುಷ್ ಕೆ, ಸಹರ್ಷ್ ವಿ ರೈ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಗೆ ಆರತಿ ಎತ್ತಿ ತಿಲಕವನ್ನು ಇಡುವ ಮೂಲಕ ಎಲ್ಲಾ ಶಿಕ್ಷಕ ವೃಂದದವರು ಸಾಮೂಹಿಕವಾಗಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಕವಿತಾ ವಿ ರೈ, ಧನ್ಯ ಎಂ ಕೆ, ಜಯಶೀಲ ಕೆ, ಚಿತ್ರಕಲಾ ಟಿ, ರಚನ ಕಾರ್ಯಕ್ರಮವನ್ನು ಸಂಘಟಿಸಿದರು. ನಿವೃತ್ತ ಸೈನಿಕ ಗಿರೀಶ್ ಆರ್ನೋಜಿ ಮತ್ತು ಶಿಕ್ಷಕಿ ಚಿತ್ರಕಲಾ ದಂಪತಿಗಳು ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪಾಯಸದ ವ್ಯವಸ್ಥೆಯನ್ನು ಮಾಡಿದರು.