ನ.22: ಗೆಜ್ಜೆಗಿರಿಯಲ್ಲಿ ಮೂರನೇ ವರ್ಷದ ಗೆಜ್ಜೆನಾದದ ವೈಭವ

0

ಬಡಗನ್ನೂರು: ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಗೆಜ್ಜೆಗಿರಿ ಮೇಳವು ಎರಡು ವರ್ಷದ ತಿರುಗಾಟದಲ್ಲಿ ಪ್ರಚಂಡ ಪ್ರದರ್ಶನವನ್ನು ನೀಡಿ ಮನೆಮಾತಾದ ಶ್ರೀ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳವು ಮೂರನೇ ವರ್ಷದ ಪ್ರಥಮ ದೇವರ ಸೇವೆ ಆಟವು 22ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯಲಿದೆ. 

ಸಂಜೆ 5:40ಕ್ಕೆ ಗೆಜ್ಜೆ ಮುಹೂರ್ತದ ಬಳಿಕ  ಚೌಕಿ ಪೂಜೆಯೊಂದಿಗೆ, ಅಶ್ವಮೇಧ ಯಕ್ಷಗಾನ ಬಳಿಕ ಪ್ರಾಯೋಗಿಕವಾಗಿ ಕಾಲ ಕಲ್ಜಿಗ ಎಂಬ ಯಕ್ಷಗಾನವನ್ನು ಆಡಿತೋರಿಸಲಿದ್ದೇವೆ.

ಸನ್ಮಾನ
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರು  ಮತ್ತು ಕಲಾವಿದರುಗಳಿಗೆ, ಅಭಿನಂದನಾ ಕಾರ್ಯಕ್ರಮ ಜರುಗಲಿದೆ. 
ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳಾದ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆಯವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here