





ಪುತ್ತೂರು: ಮಾಣಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಮಜಲು ಇಲ್ಲಿನ ವಿದ್ಯಾರ್ಥಿಗಳಿಗೆ ಸ್ನೇಹ ಟೆಕ್ಸ್ ಟೈಲ್ಸ್ ಬೊಳ್ವಾರ್ ಪುತ್ತೂರು ಇದರ ಮಾಲಕ ಸತೀಶ್ ಕೆ ಇವರು ನೀಡಿದ ಸುಮಾರು 16000 ರೂಪಾಯಿಯ ಸಮವಸ್ತ್ರವನ್ನು ವಿತರಿಸಲಾಯಿತು. ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಇವರು ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಉಚಿತವಾಗಿ ಒದಗಿಸಿಕೊಡುವಲ್ಲಿ ಶ್ರಮಿಸಿದ ಶಾಲಾ ಎಸ್ ಡಿಎಂಸಿ ಉಪಾಧ್ಯಕ್ಷ ಮೋಹನ್ ಕುಲಾಲ್, ಎಸ್ ಡಿ ಎಂ ಸಿ ಅಧ್ಯಕ್ಷ ಸುಂದರ ಕುಲಾಲ್ ಪಿ, ಶ್ರಿ ಕ್ಷೇತ್ರ ಕುಕ್ಕಾಜೆ ಇಲ್ಲಿನ ಆಡಳಿತ ಮೊಕ್ತೇಸರ ಎಂ ಕೆ ಕುಕ್ಕಾಜೆ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಧಾ ಸಂದೇಶ್ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ಸರಿತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಸುಶ್ಮಿತಾ ಕೆ ಸ್ವಾಗತಿಸಿ, ಶಿಕ್ಷಕಿ ಮಾಲತಿ ಡಿ ಧನ್ಯವಾದ ಗೈದರು, ಶಿಕ್ಷಕಿ ಮಾಲತಿ ಎನ್ ಸಹಕರಿಸಿದರು.











