ಶ್ರೀ ಗುರುದೇವಾ ಸೇವಾ ಬಳಗದ ವತಿಯಿಂದ ಅಭಿನಂದನಾ ಸಭೆ

0

ಪುತ್ತೂರು : ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಪುತ್ತೂರು ಘಟಕದ 16 ನೇಯ ವಾರ್ಷಿಕೋತ್ಸವ ಸಲುವಾಗಿ , ನ.15 ರಂದು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇವುಗಳ ಸಹಕಾರದೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಜರುಗಿದ ಹನುಮಯಾಗ ಕಾರ್ಯ,ಸಭಾ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿ ,ಪ್ರೋತ್ಸಾಹಿಸಿ , ಬೆಂಬಲವನ್ನಿತ್ತವರಿಗೆ ಅಭಿನಂದನಾ ಕಾರ್ಯಕ್ರಮ ನ.20 ರಂದು ಹೋಟೆಲ್ ಶ್ರೀ ಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು.


ಶ್ರೀ ಗುರುದೇವಾ ಸೇವಾ ಬಳಗ ಇದರ ಅಧ್ಯಕ್ಷ ಸುಧೀರ್ ನೊಂಡಾ ಅಧ್ಯಕ್ಷತೆ ವಹಿಸಿ ಮಾತನಾಡಿ , ಒಡಿಯೂರು ಶ್ರೀಗಳ ಆಶೀರ್ವಾದ , ಭಕ್ತರ ಸಹಕಾರ ಮತ್ತು ಸಂಘಟನೆಯ ಸಹಭಾಗಿತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆದಿರುವ ಹನುಮಯಾಗ ಕಾರ್ಯವು ತುಂಬಾನೇ ಯಶಸ್ಸು ಕಂಡಿದೆ. ಇದಕ್ಕೆಲ್ಲಾ ಕಾರಣಿಕರ್ತರಾದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಮುಂದೆಯೂ ನಿಮ್ಮೆಲ್ಲರ ಪ್ರೀತಿ , ಬೆಂಬಲವು ಸದಾ ಇರಲಿ ಎಂದು ಹೇಳಿದರು.


ಗ್ರಾಮ ವಿಕಾಸ ಯೋಜನೆಯ ಸಂಪರ್ಕಾಧಿಕಾರಿ ಮಾತೇಷ್ ಭಂಡಾರಿ ,ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ , ಗುರುದೇವಾ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಶೆಟ್ಟಿ ವೇದಿಕೆಯಲ್ಲಿ ಹಾಜರಿದ್ದರು.ಅಶೋಕ್ ರೈ ಅರ್ಪಿಣಿಗುತ್ತು ಲೆಕ್ಕ ಪತ್ರ ಮಾಹಿತಿ ನೀಡಿದರು.ಒಡಿಯೂರು ಸೌಹಾರ್ದ ಸಹಕಾರಿ ನಿರ್ದೇಶಕರಾದ ಜಯಪ್ರಕಾಶ್ ರೈ ನೂಜಿಬೈಲು ಮತ್ತು ಭವಾನಿಶಂಕರ ಶೆಟ್ಟಿ , ವಿಶ್ವನಾಥ ಶೆಟ್ಟಿ ಸಾಗು , ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಕಾರ್ಯದರ್ಶಿ ಶಾರದ , ಗ್ರಾ.ವಿ.ಯೋ.ಮೇಲ್ವಿಚಾರಕಿ ಸವಿತಾ ರೈ ,ವಲಯ ಸಂಯೋಜಕಿ ಶಶಿ , ಶ್ರುತಿ ಜೀವನ್ ,ಗೀತಾ ,ಸುಜಾತಾ ,ಸುನಂದ ,ಕುಂಬ್ರ ವಲಯ ಸಂಯೋಜಕಿ ಜಯಂತಿ ಜಿ ,ಸೇವಾ ದೀಕ್ಷೆ ಶ್ರುತಿ ,ಪ್ರೇಮಲತಾ ರೈ ,ಅಶ್ವಿನಿ ,ಜಯಶ್ರೀ ,ಪ್ರತಿಭಾ , ಲಿಂಗಪ್ಪ ಗೌಡ ,ಯಮುನಾ ಎಸ್ ,ಪುಷ್ಪಾವತಿ ,ಚಂದ್ರಪ್ರಭಾ ,ಪದ್ಮ ಶೆಟ್ಟಿ ,ಕವಿತಾ ,ಉತ್ಸಲಾ ಸಹಿತ ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕಿ ಪವಿತ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here