ಪುತ್ತೂರು: J.S.S Science and Technology University ಜಯಚಾಮರಾಜೇಂದ್ರ ಕಾಲೇಜು ಆಫ್ಇಂಜಿನಿಯರಿಂಗ್ ಮೈಸೂರು ಸಂಸ್ಠೆಯ “POLYMER SCIENCE AND TECHNOLOGY” ವಿಭಾಗದ ವತಿಯಿಂದ ನ.16ರಂದು YUDO ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಂಬೈ ಇವರ ಪ್ರಾಯೋಜಕತ್ವದಲ್ಲಿ “YUDO Best Polymer Technocrat Award 2024” ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಆ ಸಂಸ್ಥೆಂಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನವು ಮೈಸೂರಿನ J.S.S Science and Technology Universityಯಲ್ಲಿ ನಡೆಯಿತು.
ಹಿರಿಯ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸಿ ಈ ಸಂಸ್ಥೆಯು ಸತತ ಮೂರು ವರ್ಷಗಳಿಂದ ಪ್ರಶಸ್ತಿಯನ್ನು ನೀಡಿಕೊಂಡು ಬಂದಿದ್ದು ಈ ಸಲದ 4ನೇ ಬಾರಿಯ ಪ್ರಶಸ್ತಿಯನ್ನು Ex EngineeringManager,Airbus Australia, ಪ್ರಸ್ತುತ ವಿದ್ಯಾರಶ್ಮಿ ಸಮೂ ಶಿಕ್ಷಣ ಸಂಸ್ಥೆಗಳು ಸವಣೂರು ಇಲ್ಲಿಯ ಆಡಳಿತಾಧಿಕಾರಿಗಳಾದ ಅಶ್ವಿನ್ ಎಲ್. ಶೆಟ್ಟಿ ಯವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ YUDO HotRunner India Pvt.Ltd.,Mumba ಇದರ ಅಧ್ಯಕ್ಷ ವಿಶಾಲ್ ಅಗರ್ವಾಲ್, J.S.S.STU ಮೈಸೂರಿನ ಉಪ ಕುಲಪತಿಗಳಾದ ಡಾ.ಎ.ಯನ್ ಸಂತೋಷ್ ಕುಮಾರ್, J.S.S.STU ಮೈಸೂರಿನ ಕುಲಸಚಿವರಾದ ಡಾ.ಎಸ್.ಎ. ಧನರಾಜ್ ಹಾಗೂ ಶ್ರೀ ಜಯ ಚಾಮರಾಜೇಂದ್ರ ಕಾಲೇಜು ಆಫ್ ಇಂಜಿನಿಯರಿಂಗ್ ಮೈಸೂರು ಸಂಸ್ಠೆಯ ಪ್ರಾಂಶುಪಾಲರಾದ ಡಾ.ಸಿ.ನಟರಾಜು ಉಪಸ್ಥಿತರಿದ್ದರು.