ಆಲಂಕಾರಿನಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಆಲಂಕಾರು ಸರಕಾರಿ ಶಾಲೆಗೆ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

ಆಲಂಕಾರು: ಆಲಂಕಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇಲ್ಲಿಗೆ ಕಿರಿಯ ಮತ್ತು ಹಿರಿಯರ ವಿಭಾಗದಲ್ಲಿ ಸಮಗ್ರ ಪ್ರಥಮ ಬಹುಮಾನ ಲಭಿಸಿದೆ.


ಹಿರಿಯರ ವಿಭಾಗದಲ್ಲಿ ದೈವಿಕ್ ಪ್ರಬಂಧ ರಚನೆ ಪ್ರಥಮ, ಕೃತಿಕಾ ಕವನ ವಾಚನ ಪ್ರಥಮ, ಮಿಸ್ಬಾ ಫಾತಿಮಾ ಆಶುಭಾಷಣ ಪ್ರಥಮ, ಆಕಾಶ್ ಡಿ ಎನ್ ಮಿಮಿಕ್ರಿ ಪ್ರಥಮ, ಚಿನ್ಮಯಿ ದೇಶಭಕ್ತಿ ಗೀತೆ ಪ್ರಥಮ, ಶಾರ್ವಿ ಯು ಎಸ್ ಚಿತ್ರಕಲೆ ಪ್ರಥಮ, ಮಿಸ್ಬಾ ಫಾತಿಮಾ ಇಂಗ್ಲಿಷ್ ಕಂಠಪಾಠ ಪ್ರಥಮ, ಫಾತಿಮಾತ್ ಅಜ್ಮೀಯ ಹಿಂದಿ ಕಂಠಪಾಠ ಪ್ರಥಮ, ಕೃಪಾಶ್ರೀ ಅಭಿನಯ ಗೀತೆ ದ್ವಿತೀಯ, ಫಾತಿಮಾತ್ ಮುಬಾಸಿರ ಅರೇಬಿಕ್ ಧಾರ್ಮಿಕ ಪಠಣ ತೃತೀಯ ಹೀಗೆ ಹಿರಿಯ ವಿಭಾಗದಲ್ಲಿ ಏಳು ಪ್ರಥಮ ಎರಡು ದ್ವಿತೀಯ ಮತ್ತು ಒಂದು ತೃತೀಯ ಬಹುಮಾನಗಳು ಲಭಿಸಿವೆ.


ಕಿರಿಯ ವಿಭಾಗದಲ್ಲಿ ಪ್ರೇಕ್ಷ ಶೆಟ್ಟಿ ಅಭಿನಯ ಗೀತೆ ಪ್ರಥಮ, ಭವಿತ್ ಆಶುಭಾಷಣ ಪ್ರಥಮ, ಐಸಾ ಫಾತಿಮಾ ಧಾರ್ಮಿಕ ಪಠಣ ಅರೇಬಿಕ್ ಪ್ರಥಮ, ಯಾನಿಕಾ ಭಟ್ ದೇಶಭಕ್ತಿ ಗೀತೆ ಪ್ರಥಮ, ವೃಷ ಬಿ.ಎನ್ ಛದ್ಮವೇಷ ಪ್ರಥಮ, ಯಾನಿಕ ಭಟ್ ಧಾರ್ಮಿಕ ಪಠಣ ಸಂಸ್ಕೃತ ಪ್ರಥಮ, ಅನುಪ್ ದೇವಾಡಿಗ ಚಿತ್ರಕಲೆ ಪ್ರಥಮ, ಸಮನ್ವಿ ಕನ್ನಡ ಕಂಠಪಾಠ ದ್ವಿತೀಯ, ಚಿರಾಗ್ ಪೂಜಾರಿ ಕ್ಲೇ ಮಾಡಲಿಂಗ್ ದ್ವಿತೀಯ ಹೀಗೆ ಏಳು ಪ್ರಥಮ ಬಹುಮಾನ, 2 ದ್ವಿತೀಯ ಬಹುಮಾನಗಳು ಲಭಿಸಿವೆ.

LEAVE A REPLY

Please enter your comment!
Please enter your name here