ಪುತ್ತೂರಿನಿಂದ 1 ಸಾವಿರ ಮಂದಿ ಕಾರ್ಯಕರ್ತರು ಭಾಗಿ – ಸಂಜೀವ ಮಠಂದೂರು
ಪುತ್ತೂರು: ಇವತ್ತು ವಕ್ಫ್ ಆಸ್ತಿ ಜ್ವಲತಂತ ಸಮಸ್ಯೆಯಾಗಿದೆ. ರೈತರು ಇವತ್ತು ರಾಜ್ಯದಲ್ಲಿ ವಕ್ಫ್ ಆಸ್ತಿಯಿಂದ ಕಾನೂನಾತ್ಮಕವಾಗಿ ಸಂಕಷ್ಟದಲ್ಲಿದ್ಧಾರೆ. ರೈತರ ಪರವಾಗಿ ಬಿಜೆಪಿ ಬೀದಿಗಳಿದು ಒಂದು ಹಂತದ ಹೋರಾಟ ಮಾಡಿದೆ. ಇದೀಗ 2ನೇ ಹಂತದ ಹೋರಾಟವಾಗಿ ಬಿಜೆಪಿ ರಾಜ್ಯಾದ್ಯಂತ ನ.21 ಮತ್ತು 22ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗಿನಿಂದ ಸಂಜೆಯ ತನಕ ಹೋರಾಟ ಮತ್ತು ಅಹವಾಲು ಸ್ವೀಕರಿಸುವ ಕೆಲಸವನನು ರಾಜ್ಯಾದ್ಯಂತ ಮಾಡಲಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಮಿನಿ ವಿಧಾನ ಸೌಧದ ಮುಂದೆ ಬೆಳಗ್ಗಿನಿಂದ ಹೋರಾಟ ಮತ್ತು ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಈಗಾಗಲೇ ಕೇಂದ್ರ ಸರಕಾರ ಒಂದು ತಂಡ ರಚನೆ ಮಾಡಿ ತಂಡದ ವರದಿಯ ಆಧಾರದಲ್ಲಿ ಮುಂದಿನ ದಿನ ಕಾನೂನಾತ್ಮಕವಾಗಿ ಮಸೂದೆಯನ್ನು ತರುವಂತಹ ಸಂದರ್ಭದಲ್ಲಿ ಕರ್ನಾಟಕ ಸರಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ವಕ್ಫ್ ಸಚಿವ ಮಹಮ್ಮದ್ ಜಮೀರ್ ಅವರು ಕರ್ನಾಟಕದಲ್ಲಿ ವಕ್ಫ್ ಆಸ್ತಿಯ ವಿಚಾರಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಯಾರ್ಯಾರ ಸ್ವಾಧೀನದಲ್ಲಿ ಉಂಟೋ ಅದರಲ್ಲಿ ಪಹಣಿಯಲ್ಲಿ ವಕ್ಫ್ ಎಂದು ಸ್ವಾಧೀನ ಮಾಡುವ ಹಂತಕ್ಕೆ ಹೋಗಿದ್ದಾರೆ. ಹಾಗಾಗಿ ರೈತರು ಇವತ್ತು ರಾಜ್ಯದಲ್ಲಿ ವಕ್ಪ್ ಆಸ್ತಿಯಿಂದ ಕಾನೂನಾತ್ಮಕವಾಗಿ ಸಂಕಷ್ಟದಲ್ಲಿದ್ದಾರೆ. ರೈತರ ಪರವಾಗಿ ಬಿಜೆಪಿ ಹೋರಾಟ ಮಾಡಲಿದೆ. ಈ ಹೋರಾಟ ನಮ್ಮ ಭೂಮಿ ನಮ್ಮ ಹಕ್ಕು ಈ ಹೋರಾಟ ಕೈಗೆತ್ತಿ ದ.ಕ. ಪುತ್ತೂರಿನಿಂದ 1 ಸಾವಿರ ಕಾರ್ಯಕರ್ತರು ಭಾಗವಹಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬೃಹತ್ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದ್ದೇವೆ ಎಂದವರು ಹೇಳಿದರು.
ರಾಜ್ಯದಲ್ಲಿ ಮೂರು ತಂಡ:
ರಾಜ್ಯದಲ್ಲಿ ವಕ್ಫ್ ಆಸ್ತಿಯ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂರು ತಂಡಗಳನ್ನು ಮಾಡಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ವಿದಾನಪರಿಷತ್ ನಾಯಕ ನಾರಾಯಣ ಸ್ವಾಮಿಯವರ ತಂಡ ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಾರ್ವಜನಿಕ ಅಹವಾಲು ಸ್ವೀಕರಾ ಮಾಡಿ ವಕ್ಪ್ ಆಸ್ತಿಯ ಕುರಿತು ರಾಜ್ಯದಲ್ಲಿ ಜನಜಾಗೃತಿ ಮೂಡಿಸಿ ರೈತರಿಗೆ ಮಾನಸಿಕ ಸ್ಥೈರ್ಯ ತುಂಬಿಸುವ ಕೆಲಸ ಮಾಡಲಿದ್ದಾರೆ. ಇದರ ಜೊತೆಗೆ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸಹಿತ ಪ್ರಮುಖ ನಾಯಕರು 8 ರಿಂದ 10 ಜಿಲ್ಲೆಗಳನ್ನೊಳಗೊಂಡ ತಂಡ ಮಾಡಿ ಅವರು ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಡಿಸೆಂಬರ್ 10 ರಿಂದ 20ರ ತನಕ ಚಳಿಗಾಲದ ಅಧಿವೇಶನ ಬೆಳಗಾಂ ನಲ್ಲಿ ನಡೆಯಲಿದೆ. ಅಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಬೆಳಗಾಂನಲ್ಲಿ ನಡೆಯಲಿದೆ ಎಂದು ಸಂಜೀವ ಮಠಂದೂರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಉಪಸ್ಥಿತರಿದ್ದರು.
ರೈತರ, ಮಠಮಂದಿರಗಳ ಪಹಣಿಯಲ್ಲಿರುವ ವಕ್ಪ್ ಹೆಸರು ಡಿಲಿಟ್ ಮಾಡಬೇಕು
ಇವತ್ತು ರೈತರ ಹೆಸರಿನಲ್ಲಿರುವ ಜಮೀನಿನಲ್ಲಿ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಿಸಿದ್ದರಿಂದ ರೈತರಿಗೆ ಸಾಲ ಸೌಲಭ್ಯ ಮಾರಾಟಕ್ಕೆ ಸಮಸ್ಯೆಯಾಗಿದೆ. ಇದನ್ನು ಸರಕಾರ ಸರಿಪಡಿಸಲು ನೋಟೀಸನ್ನು ವಾಪಾಸು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದು ಸಾಕಾಗುವುದಿಲ್ಲ. 1974ರಲ್ಲಿ ದೇವರಾಜ ಅರಸು ಇವರು ಸಂದರ್ಭ ಗಜೆಟ್ ನೋಟಿಫಿಕೇಶನ್ ಆಗುತ್ತದೆ. ಆಗ ಉಳುವವನೇ ಹೊಲದೊಡೆಯ ಎಂಬ ಕಾನೂನು ತರುವ ಸಂದರ್ಭ ಈ ಗಜೆಟ್ ನೋಟಿಪಿಕೆಶನ್ ಆಗಿದೆ. ಇವತ್ತು ಸರಕಾರ ಯಾರ್ಯಾರಿಗೆ ನೋಟೀಸ್ ಮಾಡಿದೋ ಅದನ್ನು ವಾಪಾಸು ಪಡೆದು, ಗಜೆಟ್ ನೋಟಿಪೀಕೇಶನ್ಅನ್ನು ತಿದ್ದುಪಡಿ ಮಾಡಬೇಕು. ಇವತ್ತು ರೈತರ, ಮಠಮಂದಿರಗಳ ಪಹಣಿಯಲ್ಲಿರುವ ವಕ್ಫ್ ಹೆಸರನ್ನು ಡಿಲಿಟ್ ಮಾಡಿ ಅವರ ಹೆಸರಿಗೆ ಖಾಯಂ ಮಡುವ ಕೆಲಸ ಆಗಬೇಕೆಂಬದು ನಮ್ಮ ಉದ್ದೇಶ.
ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು