ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಆಶ್ರಯದಲ್ಲಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಪುತ್ತೂರು ತಾಲೂಕು ,ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ದಿ| ಬಿ. ಸುಮಿತ್ರಾ ಟೀಚರ್ ಸ್ಮರಣಾರ್ಥ ಉಚಿತ ಹೃದ್ರೋಗ ಮತ್ತು ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನ.24ನೇ ರವಿವಾರ ಬೆಳಿಗ್ಗೆ 9:00 ಗಂಟೆಗೆ ಸರಕಾರಿ ಪ್ರೌಢ ಶಾಲೆ(R.M.S.A) ವಿಟ್ಲ ಇಲ್ಲಿ ನಡೆಯಲಿದೆ.
ಬೆಳಿಗ್ಗೆ 9:00 ಗಂಟೆಗೆ ತಾರಾನಾಥ ವಿಟ್ಲ ಅಧ್ಯಕ್ಷರು ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಪುಷ್ಪಕ್ ಕ್ಲಿನಿಕ್ ವೈದ್ಯ ಡಾ| ವಿ.ಕೆ ಹೆಗ್ಡೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉದ್ಯಮಿ ಸತ್ಯನಾರಾಯಣ ಭಟ್, ನಿಕಟಪೂರ್ವ ಕಾರ್ಯದರ್ಶಿ ಲಯನ್ಸ್ ಕ್ಲಬ್ ವಿಟ್ಲ, ಸಮಾಖಸೇವಕಿ ಬಿ. ಪುಷ್ಪಲತಾ ಮಾರ್ನಮಿಗಡ್ಡೆ, ಪುತ್ತೂರು ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಅಧ್ಯಕ್ಷ ರಾಮದಾಸ್ ಶೆಟ್ಟಿ , ರೋಟರಿ ಕ್ಲಬ್ ವಿಟ್ಲದ ಅಧ್ಯಕ್ಷ ಹರೀಶ್ ಸಿ ಎಚ್,ವಿಟ್ಲ ಭಾರತ್ ಗ್ರೂಪ್ಸ್ ಮಾಲಕ ಸಂಜೀವ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ
ಆಧಾರ್ : ಹೊಸ ನೋಂದಾವಣೆ : (0 – 18 ವರ್ಷದವರಿಗೆ ಮಾತ್ರ )
ಬೇಕಾಗುವ ದಾಖಲೆಗಳು : ಹೆಸರು ಮತ್ತು ಜನನ ಪ್ರಮಾಣ ಪತ್ರ, ವಿಳಾಸ ದಾಖಲೆ
ವಿಳಾಸ ಬದಲಾವಣೆ :
ಬೇಕಾಗುವ ದಾಖಲೆಗಳು : ಪಂಚಾಯತ್ ವಿಳಾಸ ದೃಢೀಕರಣ ಪತ್ರ ಪಡಿತರ ಚೀಟಿ, ತಹಶೀಲ್ದಾರ್ ಅಥವಾ ಗಜೆಟೆಡ್ ಆಫೀಸರ್ ಸರ್ಟಿಫಿಕೇಟ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್
ಆಧಾರ್ ಜನನ ದಿನಾಂಕ ಮತ್ತು ಹೆಸರು ಬದಲಾವಣೆ :
ಬೇಕಾಗುವ ದಾಖಲೆಗಳು : ಜನನ ಪ್ರಮಾಣ ಪತ್ರ (18 ವರ್ಷ ಒಳಗಿನವರಿಗೆ ಮಾತ್ರ) ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್
ಆಧಾರ್ – 5 ಹಾಗೂ 15 ವರ್ಷ ಪೂರ್ಣಗೊಳಿಸಿದ ಮಕ್ಕಳ ಕಡ್ಡಾಯ ಐಯೋಮೆಟ್ರಿಕ್ ನೋಂದಣಿ ಹಾಗೂ ಪರಿಷ್ಠರಣೆ :
ಬೇಕಾಗುವ ದಾಖಲೆಗಳು : ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್‌ನ ಮೂಲ ಪ್ರತಿ ಹಾಗೂ ಮೊಬೈಲ್ ಫೋನ್ ಆಧಾರ್ ಮೊಬೈಲ್ ನಂಬರ್ ತಿದ್ದುಪಡಿ
ಬೇಕಾಗುವ ದಾಖಲೆಗಳು : ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್
ಇ-ಶ್ರಮ್ ಕಾರ್ಡ್:
ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರು ಮತ್ತು ಕಾರ್ಮಿಕರು ವಿವಿಧ ಪ್ರಯೋಜನಗಳನ್ನು ಪಡೆಯಬಹುದು ಉದಾಹರಣೆಗೆ 60 ವರ್ಷಗಳ ನಂತರ ಪಿಂಚಣಿ, ಮರಣ ವಿಮೆ, ಅಸಮರ್ಥತೆಯ ಸಂದರ್ಭದಲ್ಲಿ ಎಲ್ಲಾ ಹೊಸ ಸರ್ಕಾರಿ ಯೋಜನೆಗಳು ಮತ್ತು ಹಣಕಾಸಿನ ನೆರವು ಇತ್ಯಾದಿ ಇ-ಶ್ರಮ್ ಪೋರ್ಟಲ್ ಮೂಲಕ ಸೌಲಭ್ಯಗಳಿಗೆ ಅಸಂಘಟಿತ ಕಾರ್ಮಿಕರಿಗೆ ಪ್ರವೇಶವನ್ನು ಒದಗಿಸುವ ಯೋಜನೆ ಇದೆ ಸಂಘಟಕರು ತಿಳಿಸಿದ್ದಾರೆ.