ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳೆದ ಮೂರು ವರ್ಷಗಳಿಂದ ಸಹಕಾರ ನೀಡಿದ ಭಕ್ತರಿಗೆ ಕೃತಜ್ಞತೆ ಮತ್ತು ಮಹಾವಿಷ್ಣು ಸೇವಾ ಸಮಿತಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನ.20ರಂದು ಸಂಜೆ ದೇವಳದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ಸೇವಾ ಸಮಿತಿಯ ಅಧ್ಯಕ್ಷ ಮಧು ನರಿಯೂರು ಅವರನ್ನು ಸಹಿತ ಹಲವಾರು ಮಂದಿಯನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ನಕ್ಷತ್ರಾಯ, ಅರ್ಚಕರಾದ ಪ್ರಕಾಶ್ ಕುಮಾರ್, ವಿಷ್ಣು ಅಡಿಗ, ಮಾಜಿ ಅಧ್ಯಕ್ಷರುಗಳಾದ ರವೀಂದ್ರನಾಥ ರೈ ಬಳ್ಳಮಜಲು, ಸತೀಶ್ ರೈ ಡಿಂಬ್ರಿ, ಹಿರಿಯರಾದ ಜೈರಾಜ್ ಭಂಡಾರಿ, ರಾಧಾಕೃಷ್ಣ ರೈ ಬೂಡಿಯಾರು, ಬಾಲಚಂದ್ರ ರೈ, ಜಯಶೀಲ ರೈ, ತಿರುಮಲೇಶ್ವರ ಭಟ್, ಅರವಿಂದ ಭಗವಾನ್, ಪುರುಷೋತ್ತಮ, ಆನಂದಕುಮಾರ್ ಉಳ್ಳಾಲ, ಸಂಕಪ್ಪ, ಧನರಾಜ್, ಅರುಣಾ ಸಿ, ರೈ, ಅರುಣಾ ಗಣೇಶ್ ರೈ, ಶೀನಪ್ಪ ಗೌಡ, ಗಣೇಶ್ ರೈ ಬಳ್ಳಮಜಲು, ರಮೇಶ್ ರೈ ಡಿಂಬ್ರಿ, ಸತೀಶ್ ಬೊಳಂತಿಮಾರ್, ಸುಂದರ, ದಿನೇಶ್, ಉಮೇಶ್ ನಾಯ್ಕ್, ಹರೀಶ್ ಡಿಂಬ್ರಿ, ಜಯರಾಮ ರೈ, ದಿನೇಶ್ ರೈ, ಪುಷ್ಪರಾಜ್ ರೈ, , ಭಜನಾ ಮಂಡಳಿ ಗೌರವಾಧ್ಯಕ್ಷ ಚಂದ್ರಹಾಸ ರೈ ತುಂಬೆದಕೋಡಿ, ವಿಷ್ಣು ಸೇವಾ ಸಮಿತಿ ಗೌರವಾಧ್ಯಕ್ಷ ಶಿವರಾಮ ಆಳ್ವ, ಕಾರ್ಯದರ್ಶಿಗಳಾದ ಶಶಿಧರ್ ಕಿನ್ನಿಮಜಲು, ಶ್ರೀಕೃಷ್ಣ ಬೊಳಂತಿಮಾರು, ಸದಸ್ಯರುಗಳಾದ ಕುಸುಮ ಬೋಳಂತಿಮಾರು, ಜಲಜ ಪರೆಂಕಿಲ, ಪ್ರೀತಮ್, ವಿಜಯ, ರಚನ, ಜಿತೇಶ್, ಅಂಕಿತ್, ನವೀನ್, ವಸಂತ, ಕುಸುಮ ಸುಂದರ, ಚಿದಾನಂದ, ರಾಧಾಕೃಷ್ಣ ಕುರಿಯ ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.