ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರ ಕೋಡಿಂಬಾಡಿ ಸ ಉ ಹಿ ಪ್ರಾ ಶಾಲೆ ಬೆಳ್ಳಿಪ್ಪಾಡಿ ಇದರ ಜಂಟಿ ಆಶ್ರಯದಲ್ಲಿ ಜರುಗಿದ ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ “ಪ್ರತಿಭೋತ್ಸವ” 2024-2025 ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿಯಲ್ಲಿ ಜರುಗಿತು.
ದೀಪ ಪ್ರಜ್ವಲನಾ ಮೂಲಕ ಕೋಡಿಂಬಾಡಿ ಗ್ರಾಮ ಪಂಚಾಯತ್ ಅದ್ಯಕ್ಷೆ ಮಲ್ಲಿಕಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಶುಭ ಹಾರೈಸಿದರು.ಎಸ್ ಡಿ ಎಂ ಸಿ ಅದ್ಯಕ್ಷ ವಾಸುದೇವ ಆಚಾರ್ಯ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು .ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಅಶ್ರಫ್ ಹಾಗು ಗ್ರಾ ಪಂ ಉಪಾದ್ಯಕ್ಷ ಜಯಪ್ರಕಾಶ್ ಬದಿನಾರು, ಗ್ರಾ ಪಂ ಸದಸ್ಯರಾದ ರಾಮಚಂದ್ರ ಪೂಜಾರಿ, ಉಷಾ ಲಕ್ಷ್ಮಣ ಪೂಜಾರಿ ,ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಪ್ರೇಮಲತಾ ಕುಂಡಾಪು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಹಾಗು ಸಿ ಆರ್ ಪಿ ಮಹಮ್ಮದ್ ಅಶ್ರಫ್ ಇವರನ್ನು ಗೌರವಿಸಲಾಯಿತು.ಕ್ಲಸ್ಟರಿನ ಮುಖ್ಯ ಶಿಕ್ಷಕರು ಹಾಗು ಸಿ ಆರ್ ಪಿ ಇವರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಶೋದಾ ಎನ್ ಎಂ ಮುಖ್ಯ ಶಿಕ್ಷಕಿ ಇವರನ್ನು ಸನ್ಮಾನಿಸಿ ಗೌರವಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಿ ಆರ್ ಪಿ ಮಹಮ್ಮದ್ ಅಶ್ರಫ್ ಸ್ವಾಗತಿಸಿ, ಮು ಶಿ ಯಶೋದಾ ಎನ್ಎಂ ವಂದಿಸಿದರು. ಜೋಯ್ಲಿನ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಶಿಕ್ಷಕ ವೃಂದ ಸಹಕರಿಸಿದರು.
ಸಮಾರೋಪ ಸಮಾರಂಭ
ಆ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್ ಡಿ ಎಂ ಸಿ ಅದ್ಯಕ್ಷ ವಾಸುದೇವ ಆಚಾರ್ಯ, ಮುಖ್ಯ ಅತಿಥಿ ರಾಮಣ್ಣ ಗೌಡ ಗುಂಡೊಳೆ, ಗ್ರಾ ಪಂ ಸದಸ್ಯರು ಮತ್ತು ನಿವೃತ ಶಿಕ್ಷಕಿಯರಾದ ಲಕ್ಷ್ಮೀ ಹಾಗು ಪ್ರೇಮಲತಾ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿನೇಶ್ ಕಜೆ (ಶೀಲ್ಡ್ ನ ಪ್ರಾಯೋಜಕರು) ,ಎಸ್ ಡಿ ಎಂ ಸಿ ಸದಸ್ಯರುಗಳು, ವಿಜೇತ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ಪದಕ ಹಾಗು ಶೀಲ್ಡ್ ನ್ನು ವಿತರಿಸಿದರು. ಹಿರಿಯ ಮತ್ತು ಕಿರಿಯ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಪ್ರಥಮ ಕೆಮ್ಮಾಯಿ ಸ ಉ ಹಿ ಪ್ರಾ ಶಾಲೆ ಪಡೆದುಕೊಂಡರೆ, ದ್ವಿತೀಯ ಹಿರಿಯ ಮತ್ತು ಕಿರಿಯ ಸಮಗ್ರ ಪ್ರಶಸ್ತಿಯನ್ನು ಸ ಉ ಹಿ ಪ್ರಾ ಶಾಲೆ ಬೆಳ್ಳಿಪ್ಪಾಡಿ ಪಡೆದುಕೊಂಡಿತು. ತೃತೀಯ ಸಮಗ್ರ ಪ್ರಶಸ್ತಿಯನ್ನು ಕೋಡಿಂಬಾಡಿ ಹಾಗು 34 ನೆಕ್ಕಿಲಾಡಿ ಶಾಲೆ ಪಡೆದುಕೊಂಡಿತು.
ಮುಖ್ಯ ಶಿಕ್ಷಕಿ ಯಶೋದಾ ಸ್ವಾಗತಿಸಿ ,ಮಹಮ್ಮದ್ ಅಶ್ರಫ್ ವಂದಿಸಿದರು . ಮಲ್ಲಿಕಾರ್ಜುನ್ ಹಡಗಲಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕ ವೃಂದ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.