ಕಾಣಿಯೂರು: ಚಾರ್ವಾಕ ಸ. ಉ. ಹಿ. ಪ್ರಾ. ಶಾಲೆಯಲ್ಲಿ ಮುಖ್ಯಗುರುಗಳಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದ ಪಾರ್ವತಿ ಬಿ. ಹಾಗೂ ಶಾಲಾ ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷರಾದ
ರಾಮಣ್ಣ ಗೌಡ ಪೊನ್ನೆತ್ತಡಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಲೋಕೇಶ್ ಎಣ್ಮೂರುರವರು ವಹಿಸಿದ್ದರು. ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಉದನಡ್ಕ, ಸುಲೋಚನಾ ಮೀಯೊಳ್ಪೆ, ಮೀರಾ ಕಳೆಂಜೋಡಿ, ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದಾ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸಾರಿಕಾ ದೇವರತ್ತಿಮಾರು, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಕೊರಗಪ್ಪ ಗೌಡ ಕುಕ್ಕುನಡ್ಕ, ಗೋಪಾಲಕೃಷ್ಣ ಬಾರೆಂಗಳ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ರಾಮೇಶಿ ಎಸ್.ರವರು ಸ್ವಾಗತಿಸಿ, ಜಿಪಿಟಿ ಶಿಕ್ಷಕಿ ನಯನ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಜೀವಿತಾ ವಂದಿಸಿದರು.
ಸನ್ಮಾನ:
2014 ರಿಂದ 2024ರವರೆಗೆ ಚಾರ್ವಾಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ, ಸುಳ್ಯ ತಾಲೂಕಿನ ಎಡಮಂಗಲ ಸ.ಹಿ.ಪ್ರಾ ಶಾಲೆಗೆ ವರ್ಗಾವಣೆಗೊಂಡ ಪಾರ್ವತಿ ಬಿ.ಯವರನ್ನು ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ಕಾಣಿಕೆ, ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು.
ಚಾರ್ವಾಕ ಶಾಲಾ ಹಿರಿಯ ವಿದ್ಯಾರ್ಥಿಯಾಗಿದ್ದು, 10ವರ್ಷಗಳ ಕಾಲ ಎಸ್ ಡಿ ಎಂ ಸಿ ಸದಸ್ಯರಾಗಿದ್ದು, ಬಳಿಕ 3 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೊಡುಗೈ ದಾನಿ ರಾಮಣ್ಣ ಗೌಡ ಪೊನ್ನೆತ್ತಡಿಯವರನ್ನು ಸನ್ಮಾನಿಸಲಾಯಿತು. ಟಿಜಿಟಿ ಶಿಕ್ಷಕರಾದ ಚೆನ್ನಪ್ಪ ಗೌಡ ಮತ್ತು ಅತಿಥಿ ಶಿಕ್ಷಕಿ ಹರ್ಷಿತಾ ಸನ್ಮಾನ ಪತ್ರಗಳನ್ನು ವಾಚಿಸಿದರು. ಮುಖ್ಯಗುರುಗಳಾದ ಪಾರ್ವತಿ ಬಿ. ರವರು ಶಾಲೆಗೆ 30 ಚಯರ್ ಮತ್ತು ಗೋಡೆ ಗಡಿಯಾರವನ್ನು ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಸಹಶಿಕ್ಷಕಿ ಆಶಾಲತಾ ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರನ್ನು ಅಭಿನಂದಿಸಿದರು.