ಪುತ್ತೂರು: ಇರ್ದೆ ಗ್ರಾಮದ ಬಾಲ್ಯೊಟ್ಟುಮಾರ್ ಶಿರೋಡಿಯನ್ ತರವಾಡಿನ ಧರ್ಮದೈವ ಧೂಮಾವತಿ ದೈವದ ಪೀಠ ಪ್ರತಿಷ್ಟೆ ಹಾಗೂ ಪುತ್ತೂರು ಮುಕ್ರಂಪಾಡಿ ಕೊರಗಪ್ಪ ಪೂಜಾರಿ ಕುಟುಂಬಸ್ಥರ ವತಿಯಿಂದ ಧರ್ಮ ದೈವ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವವು ನ. 23 ಹಾಗೂ 24 ರಂದು ನಡೆಯಲಿದೆ.
ನ. 23 ರಂದು ಬೆಳಿಗ್ಗೆ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿಹವನ, ಧರ್ಮದೈವ ಧೂಮಾವತಿ ದೈವದ ಪೀಠ ಪ್ರತಿಷ್ಟೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ರಾಹು ಗುಳಿಗ, ಚಾಮುಂಡಿ, ಜಾಲ ಕೊರತಿ ದೈವಗಳ ತಂಬಿಲ ನಡೆದು, ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದ ಬಳಿಕ ಕಲ್ಲಾಳ್ತ ಗುಳಿಗ ದೈವದ ಕೋಲ, ಅನ್ನಸಂತರ್ಪಣೆ, ಕುಪ್ಪೆ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ, ವರ್ಣರ ಪಂಜುರ್ಲಿ ದೈವದ ನೇಮ ನಡೆಯಲಿದೆ.
ನ. 24 ರಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕೊರತಿ ದೈವದ ಕೋಲ, ಕೊರಗಜ್ಜ ದೈವದ ಕೋಲ ನಡೆದು ಅನ್ನಸಂತರ್ಪಣೆ ಜರಗಲಿದೆ ಎಂದು ತರವಾಡು ಮನೆಯವರು ತಿಳಿಸಿದ್ದಾರೆ.