ಬಡಗನ್ನೂರು: ಹಿರಿಯ ವಿದ್ಯಾರ್ಥಿ ಸಂಘ,ಕೊಯಿಲ, ಬಡಗನ್ನೂರು ಇದರ ಆಶ್ರಯದಲ್ಲಿ ಅಶೋಕ ಜನಮನ-ಟ್ರೋಫಿ 2024 ನಿಗದಿತ ಓವರ್‌ಗಳ ಸೂಪರ್ ಸಿಕ್ಸ್ (7 ಜನರ) ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನ.24 ಕೊಯಿಲ ಬಡಗನ್ನೂರು ಶಾಲಾ ವಠಾರದಲ್ಲಿ ನಡೆಯಿತು.
ಪಂದ್ಯಾವಳಿಯನ್ನು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಸಿ.ಯಾಚ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯುವ ಜನತೆ ಸಂಘಟಿತರಾಗಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವಂತೆ ಹೇಳಿದ ಅವರು ಮುಂದೆ ಇನ್ನಷ್ಟು ಉತ್ತಮ ಕೆಲಸ ಸಂಘಟನೆ ಮುಖಾಂತರ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಮಾತನಾಡಿ, ಅಶೋಕ ಜನಮನ-ಟ್ರೋಫಿ 2024 ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲಿ ಮುಂದೆ ಇನ್ನಷ್ಟು ಉತ್ತಮ ಕಾರ್ಯಕ್ರಮ ನಡೆಯಲಿ ಎಂದು ಶುಭ ಹಾರೈಸಿದರು.
ಬಡಗನ್ನೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ ಗಿರಿಮನೆ ಮಾತನಾಡಿ ಕಳೆದ ಮೂರು ವರ್ಷಗಳ ಅಶೋಕ್ ರೈ ಅಭಿಮಾನಿಗಳ ವತಿಯಿಂದ ಕ್ರೀಡಾ ಕೂಟ ಆಯೋಜಿಸುತ್ತ ಬರುತ್ತಿರುವುದು ಸಂತೋಷಕರವಾಗಿದೆ. ಕ್ರೀಡೆ ಮನುಷ್ಯ ಆರೋಗ್ಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ.ಮತ್ತು ಮನಸಿಗೆ ನೆಮ್ಮದಿ ನೀಡುತ್ತದೆ. ಇದೆ ರೀತಿ ಮುಂದೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಮಾದರಿ ಸಂಘಟನೆಯಾಗಿ ಹೊರಹೊಮ್ಮಲಿ ಎಂದು ಹೇಳಿ ಶುಭ ಹಾರೈಸಿದರು.ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ರೈ ಕೊಯಿಲ, ಕೊಯಿಲ ಬಡಗನ್ನೂರು ಶಾಲಾ ಶಾಲಾಭಿವೃದ್ಧಿ ಸಮಿತಿ ಮಾಜಿ ,ಅಧ್ಯಕ್ಷ ಸತೀಶ್ ನಾಯ್ಕ ಸಿ.ಯಾಚ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಗೌಡ ಪಕ್ಯೋಡ್, ಉದ್ಯಮಿ ಪ್ರವೀಣ್ ಕುಮಾರ್ ಮುಡಿಪಿನಡ್ಕ (ದುಬೈ)ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ಜಗನ್ನಾಥ ಗೌಡ ಪಕ್ಯೋಡ್, ಪ್ರಕಾಶ್ ರೈ ಕೊಯಿಲ, ನವೀನ್ ಪಕ್ಕಳ, ಕೊಯಿಲ, ಕೌಸಿಕ್ ಪಕ್ಯೋಡ್, ಪ್ರದೀಪ್, ಭಾರತ್ ರೈ, ವಿನೀತ್ ರೈ, ಇವರುಗಳು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ನವೀನ್ ಪಕ್ಕಳ ವಂದಿಸಿದರು, ಪುತ್ತೂರು ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.