ಡಾ.ಫಿಯೋನಾ ಜೋೖಲಿನ್ ಮಸ್ಕರೇನ್ಹಸ್ ರವರಿಗೆ ಡಾಕ್ಟರೇಟ್ ಪದವಿ

0

ಪುತ್ತೂರು: ಪರ್ಲಡ್ಕ ಪ್ರಥ್ವಿ ನಿವಾಸಿ, ಫಿಯೋನಾ ಜೋೖಲಿನ್ ಮಸ್ಕರೇನ್ಹಸ್ ರವರು ಪ್ರತಿಷ್ಠಿತ ಸಂಸ್ಥೆ ಎನ್.ಐ.ಟಿ.ಕೆ ಸುರತ್ಕಲ್ ನ ಪ್ರೊ.ರಾಮಚಂದ್ರ ಭಟ್ ರವರ ಮಾರ್ಗದರ್ಶನದಲ್ಲಿ “Synthesis and characterization of transition metal chalcogenides for high performance supercapacitors” ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಿರುತ್ತಾರೆ. 

ಡಾ.ಜೋೖಲಿನ್ ಮಸ್ಕರೇನ್ಹಸ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲಾ ಶಿಕ್ಷಣವನ್ನು ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಬಿಎಸ್ಸಿ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಮೂರನೇ ರ್‍ಯಾಂಕ್ ನೊಂದಿಗೆ ಪಡೆದು ಸ್ನಾತಕೋತ್ತರ ಎಂಎಸ್ಸಿ ಹಾಗೂ ಪಿ.ಎಚ್.ಡಿ ಪದವಿಯನ್ನು ಸುರತ್ಕಲ್ ಎನ್.ಐ.ಟಿ.ಕೆ ಯಲ್ಲಿ ಕೇಂದ್ರ ಸರಕಾರದ ಎಂ.ಎಚ್.ಆರ್.ಡಿ ಯೋಜನೆಯಡಿಯಲ್ಲಿ ಸಂಶೋಧನೆ ಮಾಡಿ ಪಡೆದಿರುತ್ತಾರೆ.

ಇವರು ಪರ್ಲಡ್ಕ ನಿವಾಸಿ, ಸಂತ ಫಿಲೋಮಿನಾ ಕಾಲೇಜು ಹಾಗೂ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ನಿವೃತ್ತ ಆಡಳಿತ ಸಿಬ್ಬಂದಿ ಶೆರಿ ಮಸ್ಕರೇನ್ಹಸ್, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಜಾನೆಟ್ ಪಾಯಿಸ್ ಅವರ ಪುತ್ರಿಯಾಗಿರುತ್ತಾರೆ. ಪತಿ ಆನ್ಸಿಲ್ ಮಿನೇಜಸ್ ಬೆಂಗಳೂರಿನ ಕೋಲ್ಕಂ ಸಂಸ್ಥೆಯಲ್ಲಿ ಸ್ಟಾಫ್ ವೇರ್ ಇಂಜಿನಿಯರ್ ಆಗಿದ್ದು, ತಮ್ಮ ಫ್ರಾನ್ ಸ್ಟೀವ್ ಮಸ್ಕರೇನ್ಹಸ್ ಹೈದರಾಬಾದ್ ನಲ್ಲಿ ಡಾಟ ಸೈಂಟಿಸ್ಟ್ ಆಗಿರುತ್ತಾರೆ.

LEAVE A REPLY

Please enter your comment!
Please enter your name here