ಪುತ್ತೂರು: ಬದ್ರಿಯಾ ಜಮಾಅತ್ ಕಮಿಟಿ ಸಂಟ್ಯಾರು ಇದರ ಅಧೀನದಲ್ಲಿರುವ ಅನಿವಾಸಿ ಸಂಟ್ಯಾರ್ ಜಮಾತಿಗರ ಸಂಘಟನೆಯಾದ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರು ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಂತರಿಕ ಚುನಾವಣೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸಾಬಿತ್ ಅಲಿ ಕಲ್ಲರ್ಪೆ ಕೆ.ಎಸ್.ಎ, ಪ್ರ.ಕಾರ್ಯದರ್ಶಿಯಾಗಿ ಆಶಿಕ್ ಕಲ್ಲರ್ಪೆ ಯು.ಎ.ಇ, ಉಪಾಧ್ಯಕ್ಷರಾಗಿ ಬಶೀರ್ ಮರಿಕೆ ಯು.ಎ.ಇ, ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಕಲ್ಲರ್ಪೆ ಯು.ಎ.ಇ ಹಾಗೂ ಕೋಶಾಧಿಕಾರಿಯಾಗಿ ಮಹಮ್ಮದ್ ಅಲಿ ಮರಿಕೆ ಯು.ಎ.ಇ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಅಶ್ರಫ್ ಕಲ್ಲರ್ಪೆ ಯು.ಎ.ಇ, ಮಹಮ್ಮದ್ ಕಲ್ಲರ್ಪೆ ಯು.ಎ.ಇ, ಶಮೀರ್ ಸಂಟ್ಯಾರ್ ಒಮಾನ್, ನಿಶಾದ್ ಮಲಾರ್ ಕೆ.ಎಸ್.ಎ, ಶರೀಫ್ ಮರಿಕೆ ಯು.ಎ.ಇ, ಇರ್ಶಾದ್ ಕಲ್ಲರ್ಪೆ ಯು.ಎ.ಇ, ಸವಾದ್ ಮಲಾರ್ ಕೆ.ಎಸ್.ಎ, ರಾಝಿಕ್ ಬಳಕ್ಕ ಯು.ಎ.ಇ, ನಾಸಿರ್ ಕಲ್ಲರ್ಪೆ ಯು.ಎ.ಇ ಮತ್ತು ಆಸಿಫ್ ಕಲ್ಲರ್ಪೆ ಕೆ.ಎಸ್.ಎ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಶಾಫಿ ಮರಿಕೆ, ಅಶ್ರಫ್ ನೀರ್ಕಜೆ ಹಾಗೂ ಶಂಸುದ್ದೀನ್ ಕಲ್ಲರ್ಪೆ ನಡೆಸಿಕೊಟ್ಟರು.