ಪುತ್ತೂರು: ಪೆರ್ನೆ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾರತೀಯ ಜೀವ ವಿಮಾ ನಿಗಮದ ಸುವರ್ಣ ಮಹೋತ್ಸವದ ಅಂಗವಾಗಿ ರೂ.41 ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಂಡ ಜ್ಞಾನ ಸೌರಭ ಗ್ರಂಥಾಲಯವನ್ನು ಜಿ.ವಿ ರಾಮಯ್ಯ (RM, Sc Zone Hyderabad) ಉದ್ಘಾಟಿಸಿ ಗ್ರಂಥಾಲಯವು ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿ ಉಡುಪಿಯ ಭಾರತೀಯ ಜೀವ ವಿಮಾ ನಿಗಮದ ಸೀನಿಯರ್ ಡಿವಿಜನಲ್ ಮ್ಯಾನೇಜರ್ ರಾಜೇಶ್.ವಿ.ಮುಧೋಳ್ ಗ್ರಂಥಾಲಯದಲ್ಲಿರುವ ಪುಸ್ತಕದ ಭಂಢಾರ ಜ್ಞಾನದ ಆಗರವಾಗಲಿ ಎಂದು ತಿಳಿಸಿದರು.
ಜೀವ ವಿಮಾ ನಿಗಮದ ಸೇಲ್ಸ್ ಮ್ಯಾನೇಜರ್ ಪುರಂದರ ಮಾತನಾಡಿ ಮಕ್ಕಳ ಪ್ರತಿಭೆ ಅದ್ಭುತ.ಪುಸ್ತಕದ ಓದನ್ನು ಹವ್ಯಾಸವಾಗಿ ಬೆಳೆಸಬೇಕು ಎಂದರು. ದ.ಕ. ಜಿಲ್ಲೆಯ ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಸಿ.ಡಿ.ಜಯಣ್ಣನವರು ವಿದ್ಯಾರ್ಥಿಗಳು ಅತ್ಯುನ್ನತ ರೀತಿಯಲ್ಲಿ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಕೊಠಡಿಯ ಗುತ್ತಿಗೆದಾರ ಅಬ್ದುಲ್ ಫಾರೂಕ್ ಸತ್ತಿಕಲ್ಲು, ಈ ಹಿಂದೆ ರೋಟರಿ ಕ್ಲಬ್ ವತಿಯಿಂದ ಪಿಠೋಪಕರಣ ನೀಡುವಲ್ಲಿ ಸಹಕರಿಸಿದ ರೋ ಪುಸ್ಪರಾಜ ಹೆಗ್ಡೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಸಂದಂರ್ಭದಲ್ಲಿ ಗೌರವಿಸಲಾಯಿತು.
ವಿದ್ಯಾಸಂಸ್ಥೆಯ ಸಂಚಾಲಕ ಹರೀಶ ಭಂಡಾರಿ.ಟಿ.ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜೀವ ವಿಮಾ ನಿಗಮದ ಮಾರ್ಕೇಟಿಂಗ್ ಮ್ಯಾನೇಜರ್ ಬಿಜು ಜೋಸೆಫ್ ಬಂಟ್ವಾಳ ವಿಮಾ ಜೀವ ಶಾಖೆಯ ಮುಖ್ಯ ವ್ಯವಸ್ಥಾಪಕ ಸತೀಶ್ ಕುಮಾರ್ .ಕೆ ವಿದ್ಯಾಲಯದ ಪ್ರಾಂಶುಪಾಲ ಶೇಖರ ರೈ.ಕೆ ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಸತ್ಯನಾರಯಣ ರೈ ಕೆ.ಎಂ. ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಪದವಿ ಪೂರ್ವ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮ್ಯಾಕ್ಸಿಂ ಲೋಬೊ ಮತ್ತು ಪ್ರೌಢ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ತಿಮ್ಮಪ್ಪ.ಕೆ ಉಪಸ್ಥಿತರಿದ್ದರು.ಉಪನ್ಯಾಸಕ ಗಣೇಶ್ ರೈ. ಮತ್ತು ಶಿಕ್ಷಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.