ಪುತ್ತೂರಿನಲ್ಲಿ ಪ್ರಥಮ ಬಾರಿಗೆ ರಂಗಶಿಕ್ಷಣ ಪದವಿ-ವರ್ಣಕುಟೀರದಲ್ಲಿ ರಂಗ ಶಿಕ್ಷಣ ತರಬೇತಿ ಆರಂಭ

0

ಪುತ್ತೂರು: ದೆಹಲಿ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ರಂಗ ಶಿಕ್ಷಣ ಪದವಿ ಅರಂಭಗೊಂಡಿದ್ದು, ಇದರ ಉದ್ಘಾಟನೆಯು ಇತ್ತೀಚೆಗೆ ಕಲ್ಲಾರೆ ವರ್ಣಕುಟೀರದಲ್ಲಿ ನಡೆಯಿತು.


3 ವರ್ಷದ ಕೋರ್ಸ್:
ದೆಹಲಿ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮೂರು ವರ್ಷದ ಕೋರ್ಸ್ ಇದಾಗಿದ್ದು, ಅಭಿನಯ, ಮಾರ್ಷಲ್ ಆರ್ಟ್ಸ್, ರಂಗ ಸಂಗೀತ, ಸಂಗೀತ ಉಪಕರಣಗಳನ್ನು ನುಡಿಸುವುದು, ನಿರ್ದೇಶನ, ಬೆಳಕಿನ ವಿನ್ಯಾಸಗಳನ್ನು ಶಿಕ್ಷಣದಲ್ಲಿ ಒಳಗೊಂಡಿದೆ. 6 ವರ್ಷದ ಮೇಲ್ಪಟ್ಟವರು ಭಾಗವಹಿಸಬಹುದು.


ಸಭಾ ಕಾರ್ಯಕ್ರಮ:
ರವೀಂದ್ರ ದರ್ಬೆ ಮತ್ತು ರಂಗಕರ್ಮಿ ರಾಕೇಶ್ ಅತಿಥಿಗಳಾಗಿ ಭಾಗವಹಿಸಿದ್ದರು. ವರ್ಣಕುಟೀರ ಸಂಸ್ಥೆಯ ನೂತನ ಅಧ್ಯಕ್ಷೆ ಗೀತಾ ಕೆದಿಮಾರು, ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ:
ವಿಶ್ವವಿದ್ಯಾನಿಲಯದ ಚಿತ್ರಕಲೆಯಲ್ಲಿ ಆದ್ಯ ಪರೀಕ್ಷೆ ಹಾಗು ಸೀನಿಯರ್ ಡೀಪ್ಲೋಮೊದಲ್ಲಿ ಉತ್ತಮ ಅಂಕ ಪಡೆದವರಿಗೆ, ಕೀ ಬೋರ್ಡ್‌ನಲ್ಲಿ ಆದ್ಯ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪದಕವನ್ನು ನೀಡಿ ಗೌರವಿಸಲಾಯಿತು.

ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ವರ್ಣಕುಟೀರ ತಂಡದವರಿಗೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ವರ್ಣಕುಟೀರದ ಮಕ್ಕಳಿಂದ ’ಪ್ರೀತಿಯ ಗೆಳೆಯ ವೃಕ್ಷ’ ಎಂಬ ಕಿರುನಾಟಕ ವಿಶೇಷ ಬೆಳಕಿನ ವಿನ್ಯಾಸದಲ್ಲಿ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here