ಪುತ್ತೂರು:ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾಗಿ, ಮಂಗಳೂರು, ಉಡುಪಿಯಲ್ಲಿ ಹಲವು ಕಡೆಗಳಲ್ಲಿ ಶೋರೂಂಗಳನ್ನು ಹೊಂದಿರುವ ಸಾಯಿರಾಧಾ ಟಿವಿಎಸ್ ಪುತ್ತೂರಿನ ಶೋರೂಂ ನ.29ರಂದು ಬೈಪಾಸ್ ರಸ್ತೆಯ ಮಕ್ಕಳ ಮಂಟಪದ ಮುಂಭಾಗದಲ್ಲಿರುವ ಶ್ರೀನಿಧಿ ಕಾಂಪ್ಲೆಕ್ಸ್‌ನಲ್ಲಿ ಗಣಹೋಮ, ಲಕ್ಷ್ಮೀಪೂಜೆಯೊಂದಿಗೆ ಶುಭಾರಂಭಗೊಂಡಿತು.
ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ ಮಾತನಾಡಿ, 2007ರಲ್ಲಿ ಪ್ರಾರಂಭಗೊಂಡಿರುವ ಸಾಯಿರಾಧಾ ಟಿವಿಎಸ್ ಉಡುಪಿಯ ಶಿರೂರುನಿಂದ ಸುಳ್ಯ ತನಕ ಸುಮಾರು 25 ಔಟ್‌ಲೆಟ್‌ಗಳನ್ನು ಹೊಂದಿದೆ. ಪುತ್ತೂರಿನಲ್ಲಿ ಹೊಸದಾಗಿ ಶೋರೂಂ ಪ್ರಾರಂಭಿಸಲಾಗಿದೆ. ನಮ್ಮಲ್ಲಿ ಟಿವಿಎಸ್‌ನ ಕನಿಷ್ಠ ಬೆಲೆಯಿಂದ ಪ್ರಾರಂಭಿಸಿ ರೂ.3ಲಕ್ಷ ತನಕ ವಾಹನಗಳಿವೆ ಜೊತೆಗೆ ಇಲೆಕ್ಟ್ರಿಕ್ ವಾಹನಗಳಿವೆ. ಎಲ್ಲಾ ವರ್ಗದ ಜನರಿಗೂ ಅನುಕೂಲಕರವಾದ ವಾಹನಗಳು ಟಿವಿಎಸ್ ಕಂಪನಿಯಲ್ಲಿದೆ. ಮಾರಾಟದ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವುದೇ ನಮ್ಮ ಧ್ಯೇಯ. ಇದಕ್ಕಾಗಿ ಟಿವಿಎಸ್ ಕಂಪನಿಯ ನಿಯಮಗಳನ್ನು ಅನುಸರಿಸಿಯೇ ಸರ್ವೀಸ್ ನೀಡಲಾಗುತ್ತಿದೆ. ಟಿವಿಎಸ್ ಕಂಪನಿಯ ಬಿಡಿಭಾಗಗಳು, ಆಯಿಲ್ ಮಾತ್ರ ಬಳಕೆ ಮಾಡಲಾಗುತ್ತದೆ. ಸಾಯಿರಾಧದ ಸೇವೆಯನ್ನು ಪುತ್ತೂರಿಗೂ ವಿಸ್ತರಿಸಲಾಗುತ್ತಿದ್ದು ಜನತೆ ಸಹಕರಿಸುವಂತೆ ಮನವಿ ಮಾಡಿದರು.

ಜಂಟಿ ಆಡಳಿತ ನಿರ್ದೇಶಕ ಶರಣಂ ಎಂ. ಶೆಟ್ಟಿ ಮಾತನಾಡಿ, ಟಿವಿಎಸ್ ಕಂಪನಿಯ ಪೆಟ್ರೋಲ್ ಹಾಗೂ ಇಲೆಕ್ಟ್ರಿಕ್‌ನ ಎಲ್ಲಾ ಮಾದರಿಯ ವಾಹನಗಳು ನಮ್ಮಲ್ಲಿ ಲಭ್ಯವಿದೆ. ಅತೀ ಹೆಚ್ಚು ಮೈಲೇಜ್ ನೀಡುವ ವಾಹನಗಳೂ ಇವೆ. 29 ಔಟ್‌ಲೆಟ್‌ಗಳಿವೆ. ನಮ್ಮಲ್ಲಿ ಎಲ್ಲಾ ಮಾದರಿಯ, ಎಲ್ಲಾ ಬಣ್ಣಗಳ 1000ಕ್ಕೂ ಅಧಿಕ ವಾಹನಗಳ ಸಂಗ್ರಹವಿದ್ದ ಗ್ರಾಹಕರು ಬುಕ್ಕಿಂಗ್ ಮಾಡಿ ಕಾಯಬೇಕಾದ ಅವಶ್ಯಕತೆ ಬರುವುದಿಲ್ಲ. ತಕ್ಷಣದಲ್ಲಿ ವಾಹನಗಳನ್ನು ನೀಡಲಾಗುವುದು. ಬಿಡಿ ಭಾಗಗಳು ಸಾಕಷ್ಟು ಲಭ್ಯವಿದೆ. ಕಡಿಮೆ ಹಾಗೂ ಶೂನ್ಯ ಡೌನ್ ಪೇಮೆಂಟ್‌ನಲ್ಲಿ ಹಣಕಾಸು ಸಾಲ ಸೌಲಭ್ಯಗಳು ಸೇರಿದಂತೆ ಇನ್ನಷ್ಟು ವಿಶೇಷತೆಗಳು ಸಾಯಿರಾಧ ಟಿವಿಎಸ್‌ನಲ್ಲಿದ್ದು ಸೌಲಭ್ಯಗಳ ಬಗ್ಗೆ ಶೋರೂಂಗೆ ಭೇಟಿ ತಿಳಿದುಕೊಳ್ಳುವಂತೆ ವಿನಂತಿಸಿದರು.

ನೂತನ ಮಳಿಗೆಯಲ್ಲಿ ಹರೀಶ್ ಪುತ್ತೂರು ಹಾಗೂ ಅನೂಪ್‌ರವರು ಪ್ರಥಮ ಗ್ರಾಹಕರಾಗಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್ ಎಸ್ ಶೆಟ್ಟಿ, ಜಂಟಿ ಆಡಳಿತ ನಿರ್ದೇಶಕ ಶರಣಂ ಎಂ ಶೆಟ್ಟಿಯವರು ಪ್ರಥಮ ಗ್ರಾಹಕರಿಗೆ ಕೀ. ಹಸ್ತಾಂತರಿಸಿದರು.
ಸಂಸ್ಥೆಯ ಜನರಲ್ ಮ್ಯಾನೇಜರ್ ವರ್ಜನಾಥ ಆಚಾರ್ಯ, ಡಿವಿಜನಲ್ ಮ್ಯಾನೇಜರ್ ರಾಜೇಶ್ ಶೆಟ್ಟಿ, ಸೇಲ್ಸ್ ಮ್ಯಾನೇಜರ್ ಅವಿನಾಶ್, ವರ್ಕ್‌ಶಾಪ್ ಮ್ಯಾನೇಜರ್ ಪ್ರೀತೇಶ್, ಸಂಯೋಜಕ ಶಿವಪ್ರಸಾದ್, ಕಟ್ಟಡದ ಮ್ಹಾಲಕ ಪ್ರಕಾಶ್ ಹಾಗೂ ಸಂಸ್ಥೆಯ ಸಿಬಂದಿಗಳು ಉಪಸ್ಥಿತರಿದ್ದರು.