ಗೋವಾದಲ್ಲಿ ಯಕ್ಷ ಕಲರವ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

0

ಬಡಗನ್ನೂರು: ತುಳುನಾಡಿನ ಗಂಡು ಮೆಟ್ಟಿನ ಕಲೆ ಶ್ರೀ ಕ್ಷೇತ್ರ  ಗೆಜ್ಜೆಗಿರಿಯ ಯಕ್ಷಗಾನ ಮೇಳದ ಮೂರನೇ ವರ್ಷದ ಯಕ್ಷಗಾನ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವು ನ.27 ರಂದು  ಉತ್ತರ ಗೋವಾದ ಪರ್ವಾರಿ ಪುಂಡಲೀಕ ದೇವಸ್ಥಾನದ ಸಭಾಗ್ರಹದಲ್ಲಿ ನಡೆಯಿತು.ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ಗೆಜ್ಜೆಗಿರಿ ಕ್ಷೇತ್ರಾಢಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಾಜಿ ಅಧ್ಯಕ್ಷ ಜಯಂತ ನಡುಬೈಲ್, ಉದ್ಯಮಿ ಮೋಹನ್  ಶೆಟ್ಟಿ, ಗೋವಾ ತುಳುಕೂಟದ ಅಧ್ಯಕ್ಷ  ಗಣೇಶ ಇರುವತ್ತೂರು, ಯಕ್ಷಗಾನ ಸಂಚಾಲಕರಾದ ಪ್ರಶಾಂತ ಪೂಜಾರಿ  ಮಸ್ಕತ್, ನವೀನ್  ಸುವರ್ಣ, ಜಯಾನಂದ ಎಂ, ಜಯರಾಮ ಬಂಗೇರ ನಾರಾಯಣ ಮಚ್ಚಿನ , ಗೋವಾ ಬಿಲ್ಲವ ಸಂಘದ ಅಧ್ಯಕ್ಷರಾದ  ಪ್ರಕಾಶ್ ಪೂಜಾರಿ ಹಾಗೂ ಇತರ  ಗಣ್ಯರು  ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಗೋವಾ ರಾಜ್ಯದಲ್ಲಿ ಸಮಾಜದ ಸದಸ್ಯರನ್ನು ಸಂಘಟಿಸಿದ್ದ  ,  ಗೌರವಾಧ್ಯಕ್ಷರಾದ  ಚಂದ್ರ ಹಾಸ ಅಮೀನ್ ದಂಪತಿಗಳನ್ನು ಕ್ಷೇತ್ರದ ವತಿಯಿಂದ  ಅಭಿನಂದಿಸಲಾಯಿತು. ಬಳಿಕ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಯಕ್ಷಗಾನ ಮಂಡಳಿಯಿಂದ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ  ಯಕ್ಷಗಾನ ಪ್ರಸಂಗ ವಿಜೃಂಭಣೆಯಿಂದ ನಡೆಯಿತು.

LEAVE A REPLY

Please enter your comment!
Please enter your name here