ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆ ನಿವಾಸಿ ಗುರುಪ್ರಕಾಶ್ ದೇವಾಡಿಗ(45ವ)ರವರು ನ.29ರ ತಡ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಎಪಿಎಂಸಿ ರಸ್ತೆಯ ಖ್ಯಾತ ಕೊಳಲುವಾದಕ ದಿ. ಮಾದವ ದೇವಾಡಿಗ ಅವರ ಪುತ್ರ ಗುರುಪ್ರಕಾಶ್ ದೇವಾಡಿಗ ಅವರು ಸ್ವ ಉದ್ಯೋಗವಾಗಿ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿ ಮಿನಿ ಹೊಟೇಲ್ ನಡೆಸುತ್ತಿದ್ದರು. ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ತಾಯಿ ಲೀಲಾವತಿ, ಪತ್ನಿ ಅನಿತಾ ಅವರನ್ನು ಅಗಲಿದ್ದಾರೆ.