ಪಾಣಾಜೆ: 2025 ರ ಜನವರಿ 25 ರಂದು ಆರ್ಲಪದವು ಜಾತ್ರೋತ್ಸವ ಶುಭ ಸಂದರ್ಭದಲ್ಲಿ ನಡೆಯಲಿರುವ ಶ್ರೀ ಸುಬ್ರಹ್ಮಣ್ಯ್ಯೇಶ್ವರ ಯಕ್ಷಗಾನ ಕಲಾ ಸಂಘ ಪಾಣಾಜೆ ಇದರ 37 ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ನವೆಂಬರ್ 29ರಂದು ಸಂಜೆ ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದಲ್ಲಿ ಜರುಗಿತು.
ಭಜನಾ ಮಂದಿರದ ಅಧ್ಯಕ್ಷರಾದ ಪಿ. ಜಿ. ಶಂಕರನಾರಾಯಣ ಭಟ್ ಪಾಣಾಜೆ ಇವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭಾ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಆರ್ಲಪದವು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾದ ಬಾಬು ರೈ ಕೋಟೆ, ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಉಪಾಧ್ಯಕ್ಷರಾದ ಸುರೇಶ್ ಕುಮಾರ್ ಕಡಂದೇಲು, ಕಾರ್ಯದರ್ಶಿಯಾದ ಜಯರಾಮ ರೈ ಚಂಬರಕಟ್ಟ, ಸದಸ್ಯರಾದ ಸತ್ಯನಾರಾಯಣ ಅಡಿಗ ಪಾಣಾಜೆ , ಹರೀಶ್ ಕಡಮಾಜೆ, ಅಭಿಷೇಕ್ ಆರ್ಲಪದವು ಮತ್ತು ಫೋಟೋಗ್ರಾಫರ್ ಜಿ.ಎಸ್ ಹರೀಶ್ ಆರ್ಲಪದವು ಉಪಸ್ಥಿತರಿದ್ದರು.