ಗೌರವಾಧ್ಯಕ್ಷ: ಅಬ್ದುಲ್ ರಹ್ಮಾನ್ ದಾರಿಮಿ, ಅಧ್ಯಕ್ಷ: ಕಮಲ್ ನೆಲ್ಯಾಡಿ,ಪ್ರಧಾನ ಕಾರ್ಯದರ್ಶಿ: ಅಝರ್ ನೆಲ್ಯಾಡಿ, ಕೋಶಾಧಿಕಾರಿ: ರಫೀಕ್ ಪ್ರಿಯದರ್ಶಿನಿ
ನೆಲ್ಯಾಡಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕಿನ ನೆಲ್ಯಾಡಿಯ ಅನಿವಾಸಿಗಳ ಸಂಘಟನೆಯಾದ ಗಲ್ಫ್ ನೆಲ್ಯಾಡಿ ಫ್ರೆಂಡ್ಸ್ ಇದರ ಮಹಾಸಭೆಯು ಗೂಗಲ್ ಮೀಟ್ ಆನ್ಲೈನ್ ಮೂಲಕ ಇತ್ತೀಚೆಗೆ ನಡೆಯಿತು.
ಸಭೆಯನ್ನು ಅಬ್ದುಲ್ ರಹ್ಮಾನ್ ದಾರಿಮಿಯವರು ದುಆ ಮೂಲಕ ಉದ್ಘಾಟಿಸಿದರು. ರಫೀಕ್ ಪ್ರಿಯದರ್ಶಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಧ್ಯಕ್ಷರಾದ ಇಸಾಕ್ ಸಾಹೇಬ್ರವರ ನೇತೃತ್ವದಲ್ಲಿ 2024-25ನೇ ಸಾಲಿಗೆ ಹೊಸ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ದಾರಿಮಿ(ಸೌದಿ ಅರೇಬಿಯಾ), ಅಧ್ಯಕ್ಷರಾಗಿ ಕಮಲ್ ನೆಲ್ಯಾಡಿ (ಯುಎಇ), ಪ್ರಧಾನ ಕಾರ್ಯದರ್ಶಿಯಾಗಿ ಅಝರ್ ನೆಲ್ಯಾಡಿ(ಯುಎಇ), ಕೋಶಾಧಿಕಾರಿಯಾಗಿ ರಫೀಕ್ ಪ್ರಿಯದರ್ಶಿನಿ(ಯುಎಇ)ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸುಲೈಮಾನ್ ಕೊಡ್ಲಿಪೇಟೆ(ಕತಾರ್), ಅಶ್ರಫ್ ಜಮಾಲಿಯ(ಸೌದಿ ಅರೇಬಿಯಾ), ಅಬ್ದುಲ್ ರಹಿಮಾನ್ ಮೋನು(ಕುವೈಟ್), ಕಾರ್ಯದರ್ಶಿಗಳಾಗಿ ಜಲೀಲ್ ನೆಲ್ಯಾಡಿ(ಬಹರೈನ್), ಝಕರಿಯ ಎನ್.ಎಸ್.(ಸೌದಿ ಅರೇಬಿಯಾ), ನವಾಜ್ ಸುಜಯ್ ನೆಲ್ಯಾಡಿ(ಯುಎಇ), ಸಂಚಾಲಕರಾಗಿ ಶಾಹುಲ್ ಹಮೀದ್(ಯುಎಇ), ಮಾಧ್ಯಮ ವಕ್ತಾರರಾಗಿ ಹಕ್ ನೆಲ್ಯಾಡಿ (ಮಕ್ಕಾ,ಸೌದಿ ಅರೇಬಿಯಾ), ಲೆಕ್ಕ ಪರಿಶೋಧಕರಾಗಿ ಇಲ್ಯಾಸ್ (ಕತಾರ್), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸಾಕ್ ಸಾಹೇಬ್ ಕೌಕ್ರಾಡಿ(ಯುಎಇ), ಅಶ್ರಫ್ ಎಂ.ಕೆ(ಯುಎಇ), ಮುನೀರ್ ಎಂ (ಸೌದಿ ಅರೇಬಿಯಾ), ರಶೀದ್ ನೆಲ್ಯಾಡಿ (ಸೌದಿ ಅರೇಬಿಯಾ), ಮದನಿ ಸಿ.ಕೆ(ಯುಎಇ) ಆಯ್ಕೆಯಾದರು. ಕಮಲ್ ನೆಲ್ಯಾಡಿ ಸ್ವಾಗತಿಸಿ, ಅಝರ್ ನೆಲ್ಯಾಡಿ ವಂದಿಸಿದರು. ರಫೀಕ್ ಪ್ರಿಯದರ್ಶಿನಿ ನಿರೂಪಿಸಿದರು.