ನೆಲ್ಯಾಡಿ: ಜೇಸಿಐ ನೆಲ್ಯಾಡಿ ಇದರ 2025ನೇ ಸಾಲಿನ ಘಟಕಾಡಳಿತ ಮಂಡಳಿ ಅಧ್ಯಕ್ಷರಾಗಿ ಡಾ.ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ನವ್ಯ ಪ್ರಸಾದ್, ಕೋಶಾಧಿಕಾರಿಯಾಗಿ ಜಾಹ್ನವಿ ಐ., ಮಹಿಳಾ ಜೇಸಿ ಅಧ್ಯಕ್ಷರಾಗಿ ಪ್ರವೀಣಿ ಸುಧಾಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ನ.27ರಂದು ನೆಲ್ಯಾಡಿ ಜೇಸಿಐ 2024ನೇ ಸಾಲಿನ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ಐಐಸಿಟಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ದಯಾಕರ ರೈ ಅವರು ಚುನಾವಣಾಧಿಕಾರಿಯಾಗಿದ್ದರು. ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ಸತೀಶ್ ಕೆ., ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಸುಪ್ರೀತಾ ರವಿಚಂದ್ರ, ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ವಿಮಲ್ ಕುಮಾರ್, ಸಮುದಾಯ ವಿಭಾಗದ ಉಪಾಧ್ಯಕ್ಷರಾಗಿ ವಿನ್ಯಾಸ್ ಬಂಟ್ರಿಯಾಲ್, ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾಗಿ ಸೌಮ್ಯ ವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಲೀಲಾ ಮೋಹನ್, ನಿರ್ದೇಶಕರಾಗಿ ಮಿಥುನ್ ಜಿ.ಎಸ್., ಯತೀಶ್ ಶೆಟ್ಟಿ, ಪುಷ್ಪ ನಾರಾಯಣ್, ಜೋಸೆಫ್ ಶರಣ್, ಅನುಪಮ್, ಮಹಿಳಾ ಜೇಸಿ ಸಂಯೋಜಕರಾಗಿ ರೇಷ್ಮಾ ರೈ ಎನ್., ಜೆಜೇಸಿ ಸಂಯೋಜಕರಾಗಿ ವಿಶ್ವನಾಥ ಶೆಟ್ಟಿ, ಪ್ರಗತಿ ಸಂಪಾದಕರಾಗಿ ವಿನಯ್ ರಾವ್ ಪಿ.,ಅವರು ಆಯ್ಕೆಯಾದರು.
Home ಇತ್ತೀಚಿನ ಸುದ್ದಿಗಳು ಜೆಸಿಐ ನೆಲ್ಯಾಡಿ 2025ರ ಘಟಕಾಡಳಿತ ಮಂಡಳಿ – ಅಧ್ಯಕ್ಷ: ಡಾ.ಸುಧಾಕರ್ ಶೆಟ್ಟಿ, ಕಾರ್ಯದರ್ಶಿ: ನವ್ಯ ಪ್ರಸಾದ್,...