ಪುತ್ತೂರು: ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಕುರಿತು ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹಕ್ಕೆ ಸಂಬಂಧಿಸಿದಂತೆ ಆರೋಪಿ ಅದ್ದು ಪಡೀಲ್ ವಿರುದ್ಧ ದಲಿತಾ ದೌರ್ಜನ್ಯ, ಮಹಿಳಾ ದೌರ್ಜನ್ಯ ಹಾಗೂ ಸಾಮಾಜಿಕ ಜಾಲತಾಣ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪುತ್ತೂರು ನಗರ ಸಭೆಯ ಅಧ್ಯಕ್ಷೆಯಾಗಿರುವ ಪ.ಜಾತಿಗೆ ಸೇರಿದ ನನ್ನ ಮೇಲೆ ಹಾಗೂ ನಗರ ಸಭೆಯನ್ನು ಅವಮಾನ ಮಾಡುವ ಮತ್ತು ಮಾನಹಾನಿಕರವಾಗಿ ಬರೆಯುತ್ತಿರುವ ಅದ್ದು ಪಡೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ನೀಡಿದ ದೂರಿನಂತೆ ಅದ್ದು ಪಡೀಲ್ ವಿರುದ್ಧ ನಗರ ಠಾಣಾ ಪೊಲೀಸರು ದಲಿತ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.