ಡಿ.6 ರಂದು ರಾತ್ರಿ ವಿಶೇಷ ಕಾರ್ತಿಕ ಪೂಜೆ, ಡಿ.7 : ಚಂಪಾ ಷಷ್ಠಿ ಮಹೋತ್ಸವ, ಸಂಜೆ ಯಕ್ಷಗಾನ ಬಯಲಾಟ
ಪುತ್ತೂರು : ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯಲಿರುವ ಚಂಪಾ ಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯು ರವಿವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಡಿ.6 ಮತ್ತು 7 ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಕೈಗೊಳ್ಳಬೇಕಾದ ಸಿದ್ಧತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಷಷ್ಠಿ ವೃತದವರಿಗೆ ಪರ್ಯಾಯ ವ್ಯವಸ್ಥೆ, ಭಜನೆ, ಯಕ್ಷಗಾನ, ಅನ್ನಸಂತರ್ಪಣೆ ವಿಭಾಗದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು.
ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ಡಿ.6 ರಂದು ರಾತ್ರಿ 8.30 ಕ್ಕೆ ವಿಶೇಷ ಕಾರ್ತಿಕ ಪೂಜೆ ನಡೆಯಲಿದೆ. ಡಿ.7 ರಂದು ಚಂಪಾ ಷಷ್ಟಿ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಗಣಪತಿ ಹವನ, ಬೆಳಗ್ಗೆ 11 ಕ್ಕೆ ಆಶ್ಲೇಷಾ ಬಲಿ ಸೇವೆ, ನಾಗತಂಬಿಲ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಹನುಮಗಿರಿ ಮೇಳದ ವತಿಯಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ವತಿಯಿಂದ ಸಮಗ್ರ ಭೀಷ್ಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಪ್ರವೀಣ್ ಶಂಕರ, ಮೊಕ್ತೇಸರಾದ ಮೋಹನದಾಸ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು, ಅರುಣ್ ಕುಮಾರ್ ರೈ ನಳೀಲು, ಸತೀಶ್ ರೈ ನಳೀಲು, ಬ್ರಹ್ಮಕಲಶ ಸಮಿತಿಯ ಸುಬ್ರಾಯ ಗೌಡ ಮಾಡಾವು, ಸುರೇಶ್ಚಂದ್ರ ರೈ ನಳೀಲು, ಸುಧಾಕರ ರೈ ಪಾಲ್ತಾಡಿ, ಸುರೇಶ್ ರೈ ವಿಟ್ಲ, ರೋಶನ್ ಬಾಲಾಯ,ಅಮರನಾಥ ರೈ
ವನಜಾಕ್ಷಿ ವಿಟ್ಲ, ಪರೀಕ್ಷಾ ರೈ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.