ಕಡಬ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ ಇದರ ಆಶ್ರಯದಲ್ಲಿ ಕುಂತೂರುಪದವು ಸಂತಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ನ.30ರಂದು ನಡೆದ ಕಡಬ ತಾಲೂಕು 4ನೇಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ದ.ಕ.ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಡಾ.ಸಿ.ಕೆ.ಶಾಸ್ತ್ರಿ ಕಡಬ( ಗ್ರಾಮೀಣ ಆರೋಗ್ಯ ಸೇವೆ), ಸುಬ್ರಹ್ಮಣ್ಯ ಗೌಡ (ಜಾನಪದ ಕ್ಷೇತ್ರ), ವಿ.ಐ.ಅಬ್ರಹಾಂ( ಸಮಾಜ ಸೇವೆ), ಟಿ.ರವೀಂದ್ರ ನೆಲ್ಯಾಡಿ (ಶೈಕ್ಷಣಿಕ ಸೇವೆ), ಹರೀಶ್ ಬಾರಿಂಜ (ಪತ್ರಿಕಾ ಕ್ಷೇತ್ರ), ಹೊನ್ನಪ್ಪ ಗೌಡ ಮರಂಕಾಡಿ( ಸಾಂಪ್ರದಾಯಿಕ ಕೃಷಿ), ಶಿವರಾಮ ಎಣ್ಮೂರು (ಹೈನುಗಾರಿಕೆ) ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಕುಂತೂರುಪದವು ಸಂತಜಾರ್ಜ್ ಪ್ರೌಢಶಾಲೆ ಮುಖ್ಯಶಿಕ್ಷಕ ಹರಿಶ್ಚಂದ್ರ ಕೆ, ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜು ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ರಘು ಬಿಜೂರು ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಗೌರವ ಕಾರ್ಯದರ್ಶಿ ನಾಗರಾಜ್ ಎನ್.ಕೆ., ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ., ಗೌರವ ಕೋಶಾಧ್ಯಕ್ಷ ಬಾಲಚಂದ್ರ ಮುಚ್ಚಿಂತಾಯ, ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ರಾಮಕುಂಜ, ಸದಸ್ಯರಾದ ವೆಂಕಟ್ರಮಣ ಆರ್.ನೆಲ್ಯಾಡಿ, ರಮೇಶ್ ಕೋಟೆ ಎಣ್ಮೂರು, ಹರೀಶ್ ಆಚಾರ್ಯ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸನ್ಮಾನಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಎನ್.ಕರುಣಾಕರ ಗೋಗಟೆ ಹೊಸಮಠ, ಕನ್ನಡ ಸಾಹಿತ್ಯ ಪರಿಷತ್ತು ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಡಾ| ಎಂ.ಪಿ.ಶ್ರೀನಾಥ್, ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್, ಕಡಬ ತಾಲೂಕು ಘಟಕದ ಅಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ, ಪದವು ನೆಹರು ಯುವಕ ಮಂಡಲ ಅಧ್ಯಕ್ಷ ಜಿಜೋ ಅಬ್ರಹಾಂ, ಕುಂತೂರು ಪದವು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಅಬ್ರಹಾಂ ಎಂ.ಎ., ಕುಂತೂರು, ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೋಮಪ್ಪ ಗೌಡ, ನಿವೃತ್ತ ಶಿಕ್ಷಕ ಶ್ರೀಕೃಷ್ಣಶರ್ಮ ಬಿಳಿನೆಲೆ, ಕೃಷಿಕ ರಘುರಾಮ ಭಟ್, ಹಿರಿಯ ಸಾಹಿತಿ ಟಿ.ನಾರಾಯಣ ಭಟ್ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ರೇಖಾ ಸ್ವಾಗತಿಸಿ, ಶಿಕ್ಷಕ ಚೆನ್ನಪ್ಪ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.