ಪುತ್ತೂರು: ಕಡಬ ತಾಲೂಕು ಬಂಟರ ಸಂಘ ರಚನೆ ಪ್ರಯುಕ್ತ ಸವಣೂರು ವಲಯ ಬಂಟ ಬಂಧುಗಳ ಸಮಾಲೋಚನಾ ಸಭೆ ಕಡಬ ತಾಲೂಕು ಬಂಟರ ಸಂಘದ ಸಂಚಲನಾ ಸಮಿತಿ ಅಧ್ಯಕ್ಷರಾದ ಎನ್ ಚಂದ್ರಹಾಸ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ದ.1 ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅತ್ಯಡ್ಕ ನಾರಾಯಣ ಶೆಟ್ಟಿ , ಎ ಬಿ ಮನೋಹರ ರೈ, ಶಶಿಕಿರಣ್ ರೈ ಕುಂಜತ್ತೋಡಿ, ಪಿ ಡಿ ಕೃಷ್ಣ ಕುಮಾರ್ ರೈ ದೇವಶ್ಯ, ಜಯಸೂರ್ಯ ರೈ ಮಾದೋಡಿ, ಉದಯ ರೈ ಮಾದೋಡಿ, ಹರೀಶ್ಚಂದ್ರ ರೈ ಕಾಸ್ಪಾಡಿಗುತ್ತು, ಎಂ.ಕೆ.ಜತ್ತಪ್ಪ ರೈ ಮೊಡಪ್ಪಾಡಿಗುತ್ತು ಬರೆಪ್ಪಾಡಿ, ಅಮರನಾಥ ರೈ, ನಾಗೇಶ್ ರೈ ಮಾಳ, ಧರ್ಮಪಾಲ ರೈ ಪಿಜಕ್ಕಳ, ವಸಂತ ರೈ ಕಾರ್ಕಳ , ಸುನಿಲ್ ರೈ ಬಲ್ಕಾಡಿ, ಸುರೇಶ್ ರೈ ಸೂಡಿಮುಳ್ಳು, ರಾಕೇಶ್ ರೈ ಕೆಡೆಂಜಿ, ಪ್ರಕಾಶ್ ರೈ ಸಾರಕರೆ, ಮತ್ತಿತರ ಸಮಾಜ ಬಂಧುಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಸಮಾಜ ಬಂಧುಗಳ ಮನೆ ಸಂಪರ್ಕ ಮಾಡಿ ಮಾಹಿತಿ ಸಂಗ್ರಹಿಸುವ ಯೋಜನೆ ಸೇರಿದಂತೆ ಮುಂದಿನ ಚಟುವಟಿಕೆಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.