ಶಿವಳ್ಳಿ ಸಂಪದ ಬೊಳುವಾರು, ದರ್ಬೆ ವಲಯ ಹಾಗೂ ಮಹಿಳಾ ಸಂಪದ ಜಂಟಿ ಆಶ್ರಯದಲ್ಲಿ ʼದೀಪಾವಳಿ ಸಂಭ್ರಮ-2024ʼ ಕಾರ್ಯಕ್ರಮ

0

ಪುತ್ತೂರು: ಶಿವಳ್ಳಿ ಸಂಪದ ಬೊಳುವಾರು ಮತ್ತು ದರ್ಬೆ ವಲಯ, ಮಹಿಳಾ ಸಂಪದ ಬೊಳುವಾರು ಮತ್ತು ದರ್ಬೆ ಇದರ ಜಂಟಿ ಆಶ್ರಯದಲ್ಲಿ ಡಿ.1ರಂದು ದ್ರಾವಿಡ ಬ್ರಾಹ್ಮಣ ಸಭಾಭವನದಲ್ಲಿ ʼದೀಪಾವಳಿ ಸಂಭ್ರಮ-2024ʼ ನಡೆಯಿತು.

ಈ ಸಮಾರಂಭದಲ್ಲಿ ಸಾಧಕರಿಗೆ ಗೌರವ ಸಮರ್ಪಣೆ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಾ. ಶ್ರೀಪತಿ ರಾವ್ ಪ್ರಗತಿ ಆಸ್ಪತ್ರೆ, ಪುತ್ತೂರು, ಹರೀಶ್ ಭಟ್ ತುಳಸಿ ಕೆಟರರ್ಸ್ ಪುತ್ತೂರು, ಕವಿತಾ ಅಡೂರು ಪುತ್ತೂರು ಅವರನ್ನು ಸನ್ಮಾನಿಸಲಾಯಿತು. ಜಿ.ಎಲ್ ಬಲರಾಮ್ ಆಚಾರ್ಯ ದೀಪೋಜ್ವಲನೆ ಮಾಡುವ ಮೂಲಕ ಶುಭಹಾರೈಸಿದರು. ಯದುಕುಮಾರ್ ಕೊಳತ್ತಾಯ, ಶಿವಳ್ಳಿ ಸಂಪದದ ತಾಲೂಕು ಅಧ್ಯಕ್ಷರಾದ ಸುಧೀಂದ್ರ ಕುದ್ದಣ್ಣಾಯ, ಸುನೀತಾ ನಿಡ್ವಣ್ಣಾಯ ಸಾಧಕರನ್ನು ಸನ್ಮಾನಿಸಿದರು.

ವಲಯದ ಅಧ್ಯಕ್ಷ ಗಣೇಶ್ ಕೆದಿಲಾಯರು ಸಂದರ್ಭೋಚಿತವಾಗಿ ಮಾತನಾಡಿದರು. ವಲಯ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ, ವಂದನಾರ್ಪಣೆಗೈದರು. ಆಶ್ರಿತ್ ಕೃಷ್ಣ ದಾಳಿಂಬ ಪ್ರಾರ್ಥಿಸಿ, ರಮಾದೇವಿ ಅತಿಥಿಗಳನ್ನು ಸ್ವಾಗತಿಸಿ, ಪೂಜಾ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ವೀಣಾ ನಾಗೇಶ್ ತಂತ್ರಿ, ಅನ್ನಪೂರ್ಣ ಎಸ್.ಕೆ ರಾವ್, ಪ್ರೇಮಲತಾ ರಾವ್ , ವತ್ಸಲಾರಾಜ್ಞಿ, ತಾಲೂಕು ಕಾರ್ಯದರ್ಶಿ, ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯ ಉಪಸ್ಥಿತರಿದ್ದರು.
ರಂಗನಾಥ ರಾವ್, ಕೃಷ್ಣರಾಜ್ ಎರ್ಕಾಡಿತ್ತಾಯ, ಶ್ರೀಧರ ಬೈಪಾಡಿತ್ತಾಯ, ದಿವಾಕರ ನಿಡ್ವಣ್ಣಾಯ, ಸತೀಶ್‌ ಕೆದಿಲಾಯ, ರತ್ನಾಕರ, ಸಂಪದದ ಸರ್ವಸದಸ್ಯರ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾರಂಭವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here