ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ಪ್ರಾಂತೀಯ ಸಮ್ಮೇಳನ ಡಿ.1ರಂದು ಮಡಿಕೇರಿಯ ಗೋಣಿಕೊಪ್ಪದಲ್ಲಿ ನಡೆಯಿತು.
ಈ ಸಮ್ಮೇಳನದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್‌ಗೆ ಬೆಸ್ಟ್ ಲೀಜನ್ ಅವಾರ್ಡ್, ಬೆಸ್ಟ್ ಕಾಂಟ್ರಿಬ್ಯೂಷನ್ ಲೀಜನ್ ಅವಾರ್ಡ್, ಬೆಸ್ಟ್ ಲೀಜನ್ ಪ್ರೆಸಿಡೆಂಟ್ ಅವಾರ್ಡ್, ಸ್ಪಾಟ್ ಲೈಟ್ ಅವಾರ್ಡ್ ಲಭಿಸಿದೆ.
ಪ್ರಶಸ್ತಿಯನ್ನು ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ರಾಷ್ಟ್ರೀಯ ಅಧ್ಯಕ್ಷರಾದ ಚಿತ್ರಕುಮಾರ್ ಅವರು ನೀಡಿ ಗೌರವಿಸಿದರು. ನೆಲ್ಯಾಡಿ ಲೀಜನ್ ಅಧ್ಯಕ್ಷರಾದ ಶೀನಪ್ಪ ಎಸ್, ರಾಷ್ಟ್ರೀಯ ಅಧಿಕಾರಿ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಮೋಹನ್ ಕುಮಾರ್, ಸದಸ್ಯರಾದ ಚಂದ್ರಶೇಖರ್ ಬಾಣಜಾಲು, ಜಯಾನಂದ ಬಂಟ್ರಿಯಾಲ್, ಉಲ್ಲಹನನ್, ಪ್ರಶಾಂತ್ ಸಿ.ಎಚ್. ಅವರು ಪ್ರಶಸ್ತಿ ಸ್ವೀಕರಿಸಿದರು.