ಕಾವು: ಭಾರತೀಯ ಜನತಾ ಪಕ್ಷ ಕಾವು -ಮಾಡ್ನೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 204 ನನ್ಯ ಬೂತ್ ನ ನೂತನ ಪದಾಧಿಕಾರಿಗಳ ಆಯ್ಕೆ ನನ್ಯ ಜನಮಂಗಳ ಸಭಾ ಭವನದಲ್ಲಿ ಡಿ.3ರಂದು ನಡೆಯಿತು. ನೂತನ ಅಧ್ಯಕ್ಷರಾಗಿ ನವೀನ್ ನನ್ಯ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿಯಾಗಿ ನಿತಿನ್ ಬಲ್ಯಾಯ ಮದ್ಲ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರನ್ನಾಗಿ ಪೂವಪ್ಪ ನಾಯ್ಕ ಕುಂಞಕುಮೇರು, ಭಾಸ್ಕರ ಬಲ್ಯಾಯ ಕಾವು,ಶ್ರೀಕಾಂತ್ ಕಾವು, ಧನಂಜಯ ನಾಯ್ಕ ಕುಂಞಕುಮೇರು, ರಾಮಣ್ಣ ನಾಯ್ಕ ಅಚಾರಿಮೂಲೆ, ಧರ್ಮಲಿಂಗಂ ಕಾವು, ಅಜಿತ್ ಕೆರೆಮೂಲೆ, ಹೇಮಾವತಿ ಚಾಕೋಟೆ, ಅನಿತಾ ಅಚಾರಿಮೂಲೆ, ನಿರ್ಮಲ ರೈ ಮದ್ಲ ಇವರುಗಳನ್ನು ಆಯ್ಕೆ ನಡೆಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನರಿಮೊಗರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸತೀಶ್ ಪಾಂಬರು ನಡೆಸಿಕೊಟ್ಟು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.ನೆಟ್ಟಣಿಗೆ ಮುಡ್ನೂರು ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ,ಜಿಲ್ಲಾ ಎಸ್ ಟಿ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ ಕುಂಞಕುಮೇರು,ಪುತ್ತೂರು ತಾಲೂಕು ಎಸ್ ಸಿ ಮೋರ್ಚಾದ ಅಧ್ಯಕ್ಷರಾದ ಲೋಹಿತ್ ಅಮ್ಚಿನಡ್ಕ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು. ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ನಾರಾಯಣ ಆಚಾರ್ಯ ಮಳಿ ಸ್ವಾಗತಿಸಿ , ನೂತನ ಬೂತ್ ಅಧ್ಯಕ್ಷ ನವೀನ್ ನನ್ಯಪಟ್ಟಾಜೆ ವಂದಿಸಿದರು. ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು