ಕಾವು: ಮಾಡ್ನೂರು ಗ್ರಾಮದ ಕಾವು ಚಿಕ್ಕಪೇಟೆ ನಿವಾಸಿ ಚಿಕ್ಕಪ್ಪ ರೈ(ವ.78)ಯವರು ಡಿ.4ರಂದು ಬೆಳಿಗ್ಗೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಚಿಕ್ಕಪ್ಪ ರೈಯವರು ಕಾವು ಚಿಕ್ಕಪೇಟೆಯಲ್ಲಿ ತನ್ನ ಸ್ವಂತ ಕಟ್ಟಡದಲ್ಲಿ ರಂಜನ್ ಟೆಕ್ಸ್‌ಟೈಲ್ಸ್ ಮಾಲಕತ್ವದ ಮೂಲಕ ಹಲವು ವರ್ಷಗಳಿಂದ ಟೈಲರ್ ವೃತ್ತಿಯನ್ನು ಮಾಡುತ್ತಿದ್ದರು. ಮೃತರು ಪತ್ನಿ ಜಯಂತಿ, ಪುತ್ರರಾದ ಪಂಚಶ್ರೀ ಸರ್ವಿಸಸ್‌ನ ಮಾಲಕ ಹರಿಪ್ರಸಾದ್ ರೈ, ಕ್ಯಾಂಪ್ಕೋ ಉದ್ಯೋಗಿ ಕಿರಣ್ ಪ್ರಸಾದ್, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಹರ್ಷೇಂದ್ರ ರೈ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.