ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮ ‘ಲದಲ್ ಮುನೀರ್ ಆರ್ಟ್ ಫೆಸ್ಟ್ -2024’ ಎರಡು ದಿನ ನಡೆಯಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಯ್ಯಿದ್ ಶರಫುದ್ದೀನ್ ತಂಙಳ್ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಸಾಲ್ಮರ ಉಮರ್ ದಾರಿಮಿ ಉದ್ಘಾಟಿಸಿದರು.
ಮಹಮೂದುಲ್ ಫೈಝಿ ಓಲೆಮುಂಡೋವು ಅವರು ಮುಖ್ಯ ಭಾಷಣ ಮಾಡಿ, ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮವನ್ನು ಪ್ರಶಂಸಿಸಿದರು. ಕೆ.ಆರ್ ಹುಸೈನ್ ದಾರಿಮಿ ರಂಜಲಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಜುನೈದ್ ಸಾಲ್ಮರ, ಡಾ. ಶರಫರಾಝ್ ದರ್ಬೆ, ಝೈನುದ್ದೀನ್ ಹಾಜಿ ಮುಕ್ವೆ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಯಹ್ಯಾ ತಂಙಳ್ ಸಾಲ್ಮರ, ಸಯ್ಯಿದ್ ಮುಹಮ್ಮದ್ ತಂಙಳ್ ಕಾಸರಗೋಡು, ಹಸನ್ ಹಾಜಿ ಸಿಟಿ ಬಝಾರ್, ಯು. ಮುಹಮ್ಮದ್ ಹಾಜಿ ಮೌಂಟನ್ ವ್ಯೂ ಸಾಲ್ಮರ, ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಪುತ್ತೂರು, ಅಬ್ದುಲ್ ಅಝೀಝ್ ಹಾಜಿ ಮೊಟ್ಟತ್ತಡ್ಕ, ಹನೀಫ್ ಹಾಜಿ ಬುಳೇರಿಕಟ್ಟೆ, ಅಬ್ದುಲ್ ರಹಿಮಾನ್ ಹಾಜಿ ಎಪಿಎಂಸಿ, ಅಬ್ದುಲ್ಲಾ ಎಪಿಎಂಸಿ, ಅಬ್ದುಲ್ ರಶೀದ್ ಹಾಜಿ ನೈತಾಡಿ, ಅಬೂಬಕ್ಕರ್ ಕೂರ್ನಡ್ಕ, ಅಬೂಬಕ್ಕರ್ ಮುಲಾರ್, ಅಬೂಬಕ್ಕರ್ ಅಬ್ಬು ಮೊಟ್ಟತ್ತಡ್ಕ, ಅಬ್ದುಲ್ಲಾ ಕುಂಞಿ ಮೊಟ್ಟೆತ್ತಡ್ಕ, ನಿಝಾರ್ ಮೊಟ್ಟೆತ್ತಡ್ಕ, ಉಮರ್ ಹಾಜಿ ಮುಕ್ವೆ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಅಶ್ರಫ್ ಹಾಜಿ ಗೋಳಿಕಟ್ಟೆ, ಹಂಝ ಬೊಳ್ಳಾಯಿ, ರಫೀಕ್ ಕುರಿಯ, ಅಶ್ರಫ್ ಕುರಿಯ, ಕಲಂದರ್ ಈಸ್ಟನ್ ಬೆಂಗಳೂರು, ಅರ್ಶದ್ ದರ್ಬೆ, ಬಶೀರ್ ಹಾಜಿ ದರ್ಬೆ, ಅಬ್ದುಲ್ ಲತೀಫ್ ದರ್ಬೆ, ಮುಆದ್ ಸೋಂಕಲ್ ಉಪ್ಪಳ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಇಕ್ಬಾಲ್ ಶೀತಲ್ ವಿಟ್ಲ, ಜಮಾಲುದ್ದೀನ್ ಹಾಜಿ ಮುಕ್ವೆ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಲತೀಫ್ ಕೊಡಿಪ್ಪಾಡಿ, ಇಸ್ಮಾಯಿಲ್ ಅನ್ಸಾರಿ, ಹಾಫಿಲ್ ಸಲ್ಮಾನುಲ್ ಫಾರಿಸ್ ಅಶ್ರಫಿ, ಪುತ್ತು ಹಾಜಿ ಬಾಯಾರ್, ಆಸಿಫ್ ಹಾಜಿ ತಂಬುತ್ತಡ್ಕ, ರಫೀಕ್ ಹಾಜಿ ತಂಬುತ್ತಡ್ಕ, ಅಬ್ದುಲ್ ಹಮೀದ್ ಹಾಜಿ ಲವ್ಲಿ ಬಪ್ಪಳಿಗೆ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಜುನೈದ್ ಸಾಲ್ಮರ, ಅಬ್ದುಲ್ ಹಮೀದ್ ಸಾಲ್ಮರ, ಅಡ್ವಕೇಟ್ ನೂರುದ್ದೀನ್, ಅಲಿ ಚಿಕ್ಕಮಗಳೂರು, ಅಬ್ಬಾಸ್ ಪೋಲ್ಯ, ಅಬ್ದುಲ್ ಹಮೀದ್ ಕೊಡಂಗಾಯಿ, ಹಾರಿಸ್ ಆರ್ಲಪದವು, ಬಶೀರ್ ಸಿಟಿ ಗುರುಪುರ, ಹನೀಫ್ ಹಾಜಿ ಉದಯ ಕಲ್ಲೇಗ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಅಶ್ರಫ್ ಕೆಮ್ಮಿಂಜೆ ಶಾರ್ಜಾ, ಶಮೀರ್ ಕೂರ್ನಡ್ಕ ಶಾರ್ಜಾ, ಬಾವಾ ಕೂರ್ನಡ್ಕ ಶಾರ್ಜಾ, ಬಶೀರ್ ಹಾಜಿ ಕೆಮ್ಮಿಂಜೆ ಯುಎಇ, ಅಬ್ದುಲ್ ಹಮೀದ್ ಶಾರ್ಜಾ, ಹಯಾನ್ ಪರ್ಲಡ್ಕ, ಡಿ.ಕೆ ಅಬ್ದುಲ್ ಹಮೀದ್ ಕೆಮ್ಮಾಯಿ, ಮುಹಮ್ಮದ್ ತರಕಾರಿ,ಶಾಫಿ ಇಂಜಿನಿಯರ್ ಪಾಪೆತ್ತಡ್ಕ, ಅಬ್ದುಲ್ ಖಾದರ್ ಕೂರ್ನಡ್ಕ, ಎಲ್.ಟಿ ಫಾರೂಕ್ ಹಾಜಿ ಕೂರ್ನಡ್ಕ, ರಂಳಾನ್ ಕಳಾರ ಮೊದಲಾದವರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಂದ ಮೂರು ತಂಡಗಳಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜು ಸಾಲ್ಮರ ಇದರ ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ, ನೌಫಲ್ ಮಾಸ್ಟರ್ ಆತೂರ್, ಶಮೀರ್ ಮಾಡನ್ನೂರು,
, ಹಾಫಿಳ್ ಬುರ್‌ಹಾನ್ ಕೌಸರಿ, ಹಾಫಿಳ್ ಝುಬೈರ್ ಕೌಸರಿ ಮೊದಲಾದವರು ತೀರ್ಪುಗಾರರಾಗಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಚಾಂಪಿಯನ್ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನವನ್ನು ವಿತರಿಸಲಾಯಿತು.
ಸಂಸ್ಥೆಯ ಆರ್ಗನೈಝರ್, ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಸ್ವಾಗತಿಸಿದರು. ಮ್ಯಾನೇಜರ್ ಅಬ್ದುಲ್ ಕರೀಂ ದಾರಿಮಿ ದರ್ಬೆ ವಂದಿಸಿದರು.