ಸುಳ್ಯಪದವು : ಪಡುವನ್ನೂರು ಗ್ರಾಮದ ಸುಳ್ಯಪದವು ಇಂದಾಜೆ ನಾಯಕ್ ಟ್ರಾನ್ಸ್ಪೋರ್ಟ್ ಇದರ ಮಾಲಕ ದಿವಂಗತ ಇಂದಾಜೆ ದಯಾನಂದ್ ನಾಯಕ್ ಸುಳ್ಯಪದವು ಅವರ ಪತ್ನಿ ಜಯಲಕ್ಷ್ಮಿ ಡಿ ನಾಯಕ್ ಇಂದಾಜೆ ರವರು ಡಿ.4ರಂದು ಬುಧವಾರ ಮನೆಯಲ್ಲಿ ನಿಧನರಾದರು.
ಮೃತರು ಸುಳ್ಯ ಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಆಡಳಿತ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಎಸ್ ಲಕ್ಷ್ಮಿನರಸಿಂಹ ನಾಯಕ್ ಇಂದಾಜೆ, ಪುತ್ರಿಯರಾದ ಸೀಮಾಜಗದೀಶ್ ಪ್ರಭು ದುಬೈ, ಗೀತಾಶೇಷಗಿರಿ ಶೆಣೈ ಬೆಂಗಳೂರು, ಸವಿತಾನಾಗೇಶ್ ಪ್ರಭು ಪುತ್ತೂರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.