ಪುತ್ತೂರು: ಕಳೆದ ರಾತ್ರಿ ಮಾಡ್ನೂರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿರುವ ರಬ್ಬರ್ ನಿಗಮಕ್ಕೆ ಸೇರಿದ ಶೆಡ್ಡ್ ಗೆ ನುಗ್ಗಿದ 2 ಕಾಡಾನೆಗಳು ರಬ್ಬರ್ ಟಾಪಿಂಗ್ ಗೆ ಬಳಸುವ ಪಾತ್ರೆಗಳಿಗೆ ಹಾನಿಮಾಡಿದೆ.
ಈ ಕಾಡಾನೆಗಳು ಕಳೆದ ಕೆಲವು ದಿನಗಳಿಂದ ಅಮ್ಚಿನಡ್ಕ, ಮಳಿ, ಅಂಕೊತ್ತಿಮಾರ್, ನೂಜಿಬೈಲು, ಕನಕಮಜಲು, ದೇಲಂಪಾಡಿ ಮತ್ತು ಪೆರ್ಲಂಪಾಡಿ ಆಸುಪಾಸಿನಲ್ಲಿ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿದೆ. ನಿನ್ನೆಯಷ್ಟೆ ಕಾವು ಚಾಕೋಟೆಯಲ್ಲಿ ಕೃಷಿ ತೋಟಕ್ಕೆ ನುಗ್ಗಿ ಹಾನಿ ಮಾಡಿತ್ತು. ಕಾಡಾನೆಗಳ ಉಪಟಳದಿಂದ ಆತಂಕಗೊಂಡಿರುವ ಗ್ರಾಮಸ್ಥರು, ಕೃಷಿ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.