ಪುತ್ತೂರು: ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಜನಮನ್ನಣೆಯನ್ನು ಪಡೆದಿರುವ ದ್ವಾರಕಾ ವು ಡಿ.5ರಂದು ತನ್ನ ವೆಬ್ಸೈಟ್ ನ್ನು ನವೀಕರಿಸಿ ಉದ್ಘಾಟನೆ ಕಾರ್ಯಕ್ರಮವನ್ನು ಮುಖ್ಯ ಕಛೇರಿಯಲ್ಲಿ ನಡೆಯಿತು.
ವಿಟ್ಲದ ಪ್ರಸಿದ್ಧ ಉದ್ಯಮಿಗಳಾದ ಪಿ ರಾಧಾಕೃಷ್ಣ ಪೈ ಇವರು ವೆಬ್ಸೈಟ್ ಉದ್ಘಾಟನೆಗೊಳಿಸಿ ಶುಭನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದ್ವಾರಕಾ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ಮುಖ್ಯಸ್ಥರಾದ ಪ್ರಸಾದ್ ಜಿ ಕೆ ಉಪಸ್ಥಿತರಿದ್ದು ಸಂಸ್ಥೆಗೆ ಶುಭಕೋರಿದರು. ಪುತ್ತೂರಿನ ಖ್ಯಾತ ಉದ್ಯಮಿಗಳಾದ ಮಂಜುನಾಥ ನಾಯಕ್ ಮತ್ತು ಸಚಿನ್ ನಾಯಕ್ ಉಪಸ್ಥಿತರಿದ್ದರು.
ದ್ವಾರಕಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲಕೃಷ್ಣ ಭಟ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮೃತಕೃಷ್ಣ ಹಾಗೂ ಅಶ್ವಿನಿ, ಅಮೃತಾ ಉಪಸ್ಥಿತರಿದ್ದರು ದುರ್ಗಾ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರೆ, ಅಮೃತಕೃಷ್ಣ ವಂದಿಸಿದರು. ಬಾಲಕೃಷ್ಣ ನೆಲ್ಯಾಡಿ ಮತ್ತಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.