ಐಕ್ಯ ವೇದಿಕೆ ಕೊಡಾಜೆ ಸಹಭಾಗಿತ್ವದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ
ಪುತ್ತೂರು: ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಶುಭಾರಂಭ ಹಾಗೂ ಭಾರತ್ ವೆಹಿಕಲ್ ಬಜಾರ್ ಸಂಸ್ಥೆ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ 2ನೇ ವರ್ಷಾಚರಣೆ ಹಾಗೂ ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಸಹಭಾಗಿತ್ವದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮ ಡಿ.8ರಂದು ನಡೆಯಲಿದೆ.
ಬೆಳಿಗ್ಗೆ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದ್ದು ವಿಟ್ಲ ಪೊಲೀಸ್ ಠಾಣೆಯ ಎಸ್ಸೈ ನಾಗರಾಜ್ ಹೆಚ್.ಇ, ಬೆಂಗಳೂರು ಎಚ್‌ಎಂಎಸ್ ಗ್ರೂಪ್‌ನ ಹರೀಶ್ ಎಂ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ರಮಾನಾಥ ರೈ, ನೆಟ್ಲ ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತ ಡಿ ಪೂಜಾರಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6.30ಕ್ಕೆ ಕಾರ್ಯಕ್ರಮ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಲಡ್ಕ ಜುಮಾ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಪನಾಮ ಹಾಗೂ ಮುಸ್ಲಿಂ ಸಮಾಜ ಬಂಟ್ವಾಳ ಇದರ ಪ್ರ.ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ ಭಾಗವಹಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸನ್ಮಾನ ಕಾರ್ಯಕ್ರಮ:
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಆಳ್ವ ಅನಂತಾಡಿ, ಪ್ರಾಚ್ಯ ಪಚ್ಚೆ ವನಸಿರಿ ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಪಂಡಿತ ಗಂಗಾಧರ ಕರಿಯ ಅನಂತಾಡಿ, ಪ್ರೌಢ ಶಾಲಾ ವಿಭಾಗದ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಪುನೀತ್ ಗೋಳಿಕಟ್ಟೆ ಅನಂತಾಡಿ, 17 ವರ್ಷದ ವಯೋಮಿತಿಯ ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕೌಶಿಕ್ ಹೆಚ್ ಶೆಟ್ಟಿ ವಿಜಯನಗರ ಮಾವಿನಕಟ್ಟೆ, ಪ್ರೌಢ ಶಾಲಾ ವಿಭಾಗದ ಲಾಂಗ್ ಜಂಪ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ಫೌಝನ್ ಪಾಟ್ರಕೋಡಿ ಮೊದಲಾದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಪುತ್ತೂರು ಹಾಗೂ ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ತಿಳಿಸಿದ್ದಾರೆ.