ನೆಹರೂ ನಗರದ ಕೊಕೊಗುರು ಅಡಿಗೆಮನೆ: ₹60 ಕ್ಕೆ ಅನ್ ಲಿಮಿಟೆಡ್ ಬಫೆ ಲಂಚ್, ಉಪಾಹಾರ ಗೃಹದಲ್ಲಿ ಊಟ ಮಾಡಲು 10% ರಿಯಾಯಿತಿ

0

ಪುತ್ತೂರು: ಪುತ್ತೂರಿನ ವಿದ್ಯಾರ್ಥಿಗಳಿಗೊಂದು ಸಿಹಿ ಸುದ್ದಿ. ಈಗಾಗಲೇ ಉತ್ತಮ ಗುಣಮಟ್ಟದ ಖಾದ್ಯಗಳಿಗೆ ಹೆಸರುವಾಸಿಯಾಗಿರುವ ನೆಹರೂ ನಗರದ ಕೊಕೊಗುರು ಅಡಿಗೆಮನೆ ಸಸ್ಯಾಹಾರಿ ಉಪಾಹಾರ ಗೃಹದ ಕೆಳಭಾಗದ ಕೊಠಡಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶೇಷ ಭೋಜನವನ್ನು ಸಂಸ್ಥೆಯು ಡಿಸೆಂಬರ್ 9 ರಿಂದ ಪ್ರಾರಂಭಿಸಲಿದೆ. ಇದರಲ್ಲಿ ಉಪ್ಪಿನಕಾಯಿ, ಪಲ್ಯ, ಸಾರು, ಸಾಂಬಾರು, ಬಿಳಿ ಅನ್ನ/ಕುಚ್ಚಲಕ್ಕಿ ಅನ್ನ, ಮಜ್ಜಿಗೆ ಅನಿಯಮಿತವಾಗಿರುತ್ತದೆ. ಇದರ ಬೆಲೆ ಕೇವಲ ₹60 ಮಾತ್ರ. ಈ ಅನ್ಲಿಮಿಟೆಡ್ ಬಫೆ ಲಂಚ್ ನ ಸವಲತ್ತನ್ನು ವಿವೇಕಾನಂದ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬೇಕೆನ್ನುವುದು ಕೊಕೊಗುರು ಅಡಿಗೆಮನೆಯ ಆಶಯ.
ಜೊತೆಗೆ ವಿವೇಕಾನಂದ ಸಂಸ್ಥೆಯ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ವಿಭಾಗದ ಕೆಲಸಗಾರರು ಉಪಹಾರ ಗೃಹದೊಳಗೆ ಊಟ ಮಾಡಿದರೆ 10% ರಿಯಾಯಿತಿ ಪಡೆಯಬಹುದು.

ಇದರೊಂದಿಗೆ ವಿವಿಧ ಬಗೆಯ ದಕ್ಷಿಣ, ಉತ್ತರ ಭಾರತೀಯ, ಚೈನೀಸ್ ಖಾದ್ಯಗಳು, ತಂಪು ಪಾನೀಯಗಳು, ಮಿಲ್ಕ್ ಶೇಕ್ ಹಾಗೂ ಐಸ್ ಕ್ರೀಮ್ ಗಳು ಲಭ್ಯವಿದೆ. ಇಲ್ಲಿ ಆಹಾರವನ್ನು ತಯಾರಿಸಲು ಶುದ್ಧ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಜೊತೆಗೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸುವುದರಿಂದ ನಿಮಗೆ ಮನೆಯಲ್ಲಿ ಊಟ ಮಾಡಿದ ಅನುಭವ ಸಿಗುತ್ತದೆ. ಕೊಕೊಗುರು ಅಡಿಗೆಮನೆ ಸಸ್ಯಹಾರಿ ಉಪಾಹಾರ ಗೃಹವು ಪ್ರತಿದಿನ ಬೆಳಿಗ್ಗೆ 7:00 ಗಂಟೆಯಿಂದ ರಾತ್ರಿ 9:00 ವರೆಗೂ ಕಾರ್ಯನಿರ್ವಹಿಸುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here